ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಕ್ರೈಸ್ತರಿಂದ ಕ್ರಿಸ್ಮಸ್ ಆಚರಣೆ !

ನೃತ್ಯ ಪ್ರಸ್ತುತಪಡಿಸುವ ಹೆಸರಿನಲ್ಲಿ ದೇವಸ್ಥಾನದಲ್ಲಿ ಪ್ರವೇಶ !

ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನ

ತಿರುವನಂತಪುರಂ – ನಗರದ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಆಂಧ್ರಪ್ರದೇಶದ ಕ್ರೈಸ್ತರು ಮೇಣದಬತ್ತಿ ಉರಿಸಿ ಕ್ರಿಸ್ಮಸ್ ಆಚರಿಸಿದರು. ಆಂಧ್ರ ಪ್ರದೇಶದಲ್ಲಿನ ವಿಜಯವಾಡದ ರಾಮಚಂದ್ರಮೂರ್ತಿ ಎಂಬ ಮತಾಂತರಗೊಂಡಿರುವ ಕ್ರೈಸ್ತನ ನೇತೃತ್ವದಲ್ಲಿ ಕುಚುಪುಡಿ ನೃತ್ಯ ಪ್ರಸ್ತುತಪಡಿಸುವ ಗುಂಪಿನಿಂದ ದೇವಸ್ಥಾನದಲ್ಲಿ ನೃತ್ಯ ಕಾರ್ಯಕ್ರಮಕ್ಕಾಗಿ ಅನುಮತಿ ಕೇಳಿತು. ಅವರು ಆ ದಿನದಂದು ದೇವಸ್ಥಾನದಲ್ಲಿ ಪೂಜೆ ಮಾಡುವ ಅನುಮತಿ ಕೂಡ ಪಡೆದಿದ್ದರು. ಕೇವಲ ಹಿಂದೂ ಹೆಸರಿನಿಂದ ದೇವಸ್ಥಾನದ ವ್ಯವಸ್ಥಾಪಕರು ವಿಜಯವಾಡದ ಕ್ರೈಸ್ತರಿಗೆ ಮಂಟಪದ ಜಾಗ ನೀಡಿದರು. ಅನುಮತಿ ಪಡೆದ ನಂತರ ಕ್ರೈಸ್ತರಿಂದ ಮಂಡಪದಲ್ಲಿ ಎಲ್ಲೆಡೆ ಮೇಣದಬತ್ತಿ ಉರಿಸಿ ನೃತ್ಯದ ಹೆಸರಿನಲ್ಲಿ ಕ್ರಿಸ್ಮಸ್ ಆಚರಿಸಿದರು.

೧. ಇದು ಗಮನಕ್ಕೆ ಬರುತ್ತಿದ್ದಂತೇ ದೇವಸ್ಥಾನದಲ್ಲಿನ ಹಿಂದೂ ಭಕ್ತರು ಈ ಘಟನೆಗೆ ವಿರೋಧ ವ್ಯಕ್ತಪಡಿಸಿದರು. ನಂತರ ದೇವಸ್ಥಾನದ ಭದ್ರತಾ ಸಿಬ್ಬಂದಿಗಳು ಘಟನಾಸ್ಥಳಕ್ಕೆ ಬಂದು ಮೇಣದಬತ್ತಿ ಆರಿಸಿದರು. `ಅಲ್ಲಿಯವರೆಗೆ ದೇವಸ್ಥಾನದ ಪವಿತ್ರ ಭಂಗವಾಯಿತು’, ಎಂದು ಭಕ್ತರು ಖೇಧ ವ್ಯಕ್ತಪಡಿಸಿದರು.

೨. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಮೇಣದಬತ್ತಿ ಉರಿಸಲು ಅನುಮತಿ ಇಲ್ಲ. ಅದನ್ನು ನಿಶಿಧ್ಹ ಎಂದು ನಂಬಲಾಗಿದೆ. ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಇರುವ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ತೀವ್ರ ತಪಾಸಣೆಯ ನಂತರ ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ.

೩. ದೇವಸ್ಥಾನ ಆಡಳಿತದಿಂದ ಉದ್ದೇಶಪೂರ್ವಕವಾಗಿ ಕಾನೂನು ಭಂಗ ಮಾಡುವ ಅನುಮತಿ ನೀಡಿದ್ದಾರೆ ಎಂದು ಆರೋಪವಿದೆ. `ದೇವಸ್ಥಾನದಲ್ಲಿ ನಾಸ್ತಿಕರಿಗೆ ನೌಕರಿ ನೀಡಿರುವುದರಿಂದ ಈ ರೀತಿಯ ಘಟನೆ ನಡೆಯುತ್ತದೆ’, ಎಂದು ಹಿಂದೂ ಭಕ್ತರು ಆರೋಪಿಸಿದ್ದಾರೆ. `ಯಾವಾಗ ಸರಕಾರ ದೇವಸ್ಥಾನದಲ್ಲಿನ ಪೂಜಾ ವಿಧಿ ಮತ್ತು ಪರಂಪರೆ ಇದರ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ ಆಗ ದೇವಸ್ಥಾನದ ವ್ಯವಸ್ಥೆ ತನ್ನ ಬಳಿ ಇಟ್ಟುಕೊಳ್ಳುವುದರ ಬಗ್ಗೆ ಆಗ್ರಹ ಬೇಕೆ ?’, ಎಂದು ಭಕ್ತರು ಪ್ರಶ್ನೆಯನ್ನು ಕೇಳಿದರು.

ಸಂಪಾದಕೀಯ ನಿಲುವು

  • ಹಿಂದೂಗಳ ದೇವಸ್ಥಾನಕ್ಕೆ ನುಗ್ಗಿ ಅದರ ಪಾವಿತ್ರಕ್ಕೆ ಧಕ್ಕೆ ತರುವ ಕ್ರೈಸ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಿ !
  • ಪದ್ಮನಾಭ ದೇವಸ್ಥಾನ ಸರಕಾರಿಕರಣ ಮಾಡಿರುವುದರಿಂದ ಈ ರೀತಿ ಘಟನೆ ನಡೆಯುತ್ತಿದೆ. ಆದ್ದರಿಂದ ಹಿಂದೂಗಳ ದೇವಸ್ಥಾನಗಳು ಭಕ್ತರ ವಶಕ್ಕೆ ನೀಡಿರಿ !