ವಿಷಪೂರಿತ ಸಾರಾಯಿ ಪ್ರಕರಣದ ಸೂತ್ರದಾರನ ಬಂಧನ

ನವದೆಹಲಿ – ಬಿಹಾರ ರಾಜ್ಯದಲ್ಲಿನ ಕಲಬೆರಿಕೆ ಸಾರಾಯಿ ಉತ್ಪಾದನೆ ಮಾಡಿದ ಪ್ರಕರಣದ ಮುಖ್ಯ ಸೂತ್ರಧಾರ ರಾಮಬಾಬು ಇವನನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆ. ರಾಮಬಾಬು ಇವನು ರಾಸಾಯನಿಕ ಮಿಶ್ರಣ ಮಾಡಿ ಸಾರಾಯಿ ತಯಾರಿಸಿರುವುದರಿಂದ ೭೦ ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದರು. ರಾಮ್ ಬಾಬು ಇವನ ಬಂಧನದ ಬಗ್ಗೆ ದೆಹಲಿ ಪೊಲೀಸರು ಬಿಹಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.