ನವ ದೆಹಲಿ – ಕೇರಳದಲ್ಲಿನ ನಿಷೇಧಿತ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ (ಪಿ.ಎಫ್.ಐ. ನ) ಓರ್ವ ನ್ಯಾಯವಾದಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.ಇಂದ)ವು ಇತ್ತಿಚೆಗೆ ಬಂಧಿಸಿತು. ಬಂಧಿತ ನ್ಯಾಯವಾದಿ ಮಹಮ್ಮದ್ ಮುಬಾರಕ್ ಇವನು ಎರ್ನಾಕುಲಂ ಜಿಲ್ಲೆಯಲ್ಲಿನ ಎಡವಾನಕ್ಕಡ ಇಲ್ಲಿಯ ನಿವಾಸಿಯಾಗಿದ್ದಾನೆ. `ಎನ್.ಐ.ಎ.ಇಂದ ಇತ್ತಿಚೆಗೆ ರಾಜ್ಯದ ೫೬ ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಈ ಪ್ರಕರಣದಲ್ಲಿ ಬಂಧಿಸಲಾಗಿರುವವರಲ್ಲಿ ಈತ ೧೪ ನೇ ವ್ಯಕ್ತಿಯಾಗಿದ್ದಾನೆ’, ಎಂದು ಎನ್.ಐ.ಎ. ವಕ್ತಾರರು ಹೇಳಿದ್ದಾರೆ.
RT @ani_digital: Kerala PFI case: NIA arrests practicing HC advocate, ‘hit squad trainer’ as 14th accused
Read @ANI Story | https://t.co/XAondPSlcK#KeralaPFI #NIAArrest #HCAdvocate #KeralaNews pic.twitter.com/fcHvmTeSH9 @PMOIndia #xenoh
— Aditya Lok Pathak (@Xenohadi) December 30, 2022
ಪಿ.ಎಫ್. ಐ. ಗಾಗಿ ಕಾರ್ಯನಿರತವಾಗಿರುವ ಮುಬಾರಕ್ ಇವನು `ಮಾರ್ಷಲ್ ಆರ್ಟ್ಸ್’ ಮತ್ತು `ಹಿಟ್ ಸ್ಕ್ವೇಡ’ (ಹತ್ಯೆ ಮಾಡುವ ಪಡೆ) ಶಿಕ್ಷಕನಾಗಿದ್ದಾನೆ. ಅವನು ಕೇರಳ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ಮಾಡುತ್ತಿದ್ದನು. (ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರು ಮತ್ತು ಅದರಲ್ಲಿಯೂ ಈ ಸಂಘಟನೆಯ `ಹತ್ಯೆ ಹೇಗೆ ಮಾಡಬೇಕು ?’, ಇದರ ಪ್ರಶಿಕ್ಷಣ ನೀಡುವ ಜಿಹಾದಿ ಇನ್ನು ವಕೀಲಿ ನಡೆಸುತ್ತಾನೆ, ಇದು ಹೇಗೆ ಸಾಧ್ಯ ? – ಸಂಪಾದಕರು) ಆತನ ಮನೆಯ ಮೇಲೆ ನಡೆಸಿರುವ ದಾಳಿಯಲ್ಲಿ ಮನೆಯಲ್ಲಿ ಅಡಗಿಸಿಟ್ಟಿರುವ ಕೊಡಲಿ, ಖಡ್ಗ ಮತ್ತು ಕುಡುಗೋಲು ಸಹಿತ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. `ಪಿ.ಎಫ್.ಐ.’ ವಿವಿಧ ರಾಜ್ಯಗಳಲ್ಲಿ ಬೇರೆ ಸಮುದಾಯದ ನಾಯಕರನ್ನು ಗುರಿ ಮಾಡುವುದಕ್ಕಾಗಿ `ಹಿಟ್ ಸ್ಕ್ವಾಡ’ ಸಿದ್ಧಗೊಳಿಸುತ್ತಿದ್ದನು ಮತ್ತು ಅವರಿಗೆ ಪ್ರಶಿಕ್ಷಣ ನೀಡುತ್ತಿದ್ದನು, ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಸಂಪಾದಕೀಯ ನಿಲುವು
|