ಕಾಂಗ್ರೆಸ್ ಬಹುಸಂಖ್ಯಾತ ಹಿಂದೂಗಳನ್ನು ತಮ್ಮೊಂದಿಗೆ ಸೇರಿಸಿಕೊಳ್ಳಬೇಕು !

ಕಾಂಗ್ರೆಸ್ ನಾಯಕ ಎ.ಕೆ. ಆಂಟನಿಯವರಿಂದ ಮುಸಲ್ಮಾನ ಪ್ರೇಮಿ ಕಾಂಗ್ರೆಸ್ ಗೆ ಕಪಾಳಮೋಕ್ಷ !

ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವರ ಎ.ಕೆ. ಆಂಟನಿ

ತಿರುವನಂತಪುರಮ್ (ಕೇರಳ) – ಅಲ್ಪಸಂಖ್ಯಾತರಿಗೆ ಅವರ ಧರ್ಮದ ಪಾಲನೆ ಮಾಡಲು ಸ್ವಾತಂತ್ರ್ಯವಿದೆ; ಆದರೆ ಯಾವಾಗ ಯಾರಾದರೂ ದೇವಸ್ಥಾನಕ್ಕೆ ಹೋಗುತ್ತಾರೆಯೋ, ಆಗ ತಿಲಕ ಅಥವಾ ಕುಂಕುಮ ಹಚ್ಚುತ್ತಾನೆ ಆಗ ಅವನು `ಹಿಂದುತ್ವ’ದ ಮಾರ್ಗದಲ್ಲಿದ್ದಾನೆಂದು ಹೇಳಲಾಗುತ್ತದೆ. ಇದು ಸರಿಯಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತರೊಂದಿಗೆ ಹಿಂದೂಗಳನ್ನು ಕೂಡ ತಮ್ಮ ಪಕ್ಷದೊಂದಿಗೆ ಜೋಡಿಸಲು ಪ್ರಯತ್ನಿಸುತ್ತಿದೆ. ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳಿದ್ದಾರೆ ಮತ್ತು ನರೇಂದ್ರ ಮೋದಿಯವರ ವಿರುದ್ಧದ ಹೋರಾಟದಲ್ಲಿ ಬಹುಸಂಖ್ಯಾತ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವರ ಎ.ಕೆ. ಆಂಟನಿಯವರು ಇಲ್ಲಿಯ ಕಾಂಗ್ರೆಸ ಕಾರ್ಯಾಲಯದಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಹೇಳಿದರು. ಕೇರಳದಲ್ಲಿ ಕಾಂಗ್ರೆಸ್ ನಿಂದ ಅಲ್ಪಸಂಖ್ಯಾರಿಗೆ ಹೆಚ್ಚು ಮಹತ್ವ ನೀಡುವುದರ ವಿರುದ್ಧ ಆಂಟಿನಿಯವರು ಯಾವಾಗಲೂ ಮಾತನಾಡುತ್ತಬಂದಿದ್ದಾರೆ.

2014 ರ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸೋತ ಬಳಿಕ ಕಾಂಗ್ರೆಸ್ ವಿಮರ್ಷೆ ಮಾಡಿಕೊಂಡೊತ್ತು. ಈ ವಿಮರ್ಷೆಯು ಆಂಟನಿಯವರ ನಾಯಕತ್ವದಲ್ಲಿ ನಡೆದಿತ್ತು. ಆಗ ಅವರು, `ಚುನಾವಣೆಯಲ್ಲಿ ಜಾತ್ಯತೀತತೆಯ ವಿರುದ್ಧ ಮತಾಂಥತೆಯ ಹೋರಾಟದಲ್ಲಿ ಕಾಂಗ್ರೆಸ್ಸಿನ ಮೇಲೆ ಪರಿಣಾಮ ಬೀರಿತು. ಕಾಂಗ್ರೆಸ್ಸಿನ `ಅಲ್ಪಸಂಖ್ಯಾತ ಪ್ರೇಮಿ’ ಎಂದು ತಿಳಿಯುತ್ತಾ ಹೋದರು ಎಂದು ಹೇಳಿದರು.

ಭಾಜಪದಿಂದ ಕಾಂಗ್ರೆಸ್ ಮೇಲೆ ಟೀಕೆ

೧. ಆಂಟನಿಯವರ ಹೇಳಿಕೆಯಿಂದ ಭಾಜಪದವರು ಕಾಂಗ್ರೆಸ್ಅನ್ನು ಟೀಕಿಸಿದೆ. ಭಾಜಪದ ರಾಷ್ಟ್ರೀಯ ವಕ್ತಾರ ಶಹಜಾದ ಪೂನಾವಾಲಾ ಇವರು ಟ್ವೀಟ ಮಾಡಿ, ಆಂಟನಿಯವರು ಕಾಂಗ್ರೆಸ್ಸಿನ ಮತಪೆಟ್ಟಿಗೆ ರಾಜಕಾರಣದ ಮುಖವಾಡವನ್ನು ಕಳಚಿದ್ದಾರೆ ಎಂದು ಹೇಳಿದ್ದಾರೆ.

೨. ಆಂದ್ರಪ್ರದೇಶದ ಭಾಜಪ ನಾಯಕ ವಿಷ್ಣು ವರ್ಧನ ರೆಡ್ಡಿಯವರು ಟ್ವೀಟ ಮಾಡಿ, ಇದರಿಂದ ರಾಹುಲ ಗಾಂಧಿಯವರು ತಮ್ಮನ್ನು ಜನಿವಾರ ಧರಿಸುವ ಬ್ರಾಹ್ಮಣನಾಗಿದ್ದೇನೆಂದು ಏಕೆ ಹೇಳುತ್ತಿದ್ದಾರೆಂದು ಸ್ಪಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

೩. ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಪ್ರಮುಖ ಅಮಿತ ಮಾಳವೀಯ ಇವರು ಟ್ವೀಟ ಮಾಡಿ, ಕಾಂಗ್ರೆಸ್ ಗಾಗಿ ಭಾರತೀಯ, ಇದು ಭಾರತೀಯವಲ್ಲ, ಬದಲಾಗಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರಾಗಿದ್ದಾರೆ. ಹಿಂದೂ ಮತ್ತು ಮುಸಲ್ಮಾನರೆಂದು ವಿಭಜಿಸಲ್ಪಟ್ಟಿದ್ದಾರೆ. ಆಂಟನಿಯವರ ಹೇಳಿಕೆಯಿಂದ ರಾಹುಲ ಗಾಂಧಿಯವರು ಮಂದಿರಗಳಿಗೆ ಏಕೆ ಹೋಗುತ್ತಿದ್ದಾರೆಂದು ಇದರಿಂದ ಸ್ಪಷ್ಟವಾಗುತ್ತಿದೆಯೆಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ರಾಜಕೀಯ ಲಾಭಕ್ಕಾಗಿ ಇಲ್ಲಿಯವರೆಗೆ ಮುಸಲ್ಮಾನರನ್ನು ಹತ್ತಿರ ಮಾಡಿ ಹಿಂದೂಗಳನ್ನು ಹಿಂಸಿಸುತ್ತಾ, ಅವರನ್ನು `ಕೇಸರಿ ಭಯೋತ್ಪಾದಕರು’ ಎಂದು ಕರೆಯುವ ಕಾಂಗ್ರೆಸ್ಸಿಗೆ ಈಗ ಪುನಃ ಅಧಿಕಾರಕ್ಕೆ ಬರಲು ಹಿಂದೂಗಳ ನೆನಪಾಗುತ್ತಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಇಂತಹ ಕಪಟಿ ಮತ್ತು ಹಿಂದೂದ್ವೇಷಿ ಕಾಂಗ್ರೆಸ್ ನ ರಾಜಕೀಯ ಅಸ್ತಿತ್ವವೇ ನಷ್ಟಗೊಳ್ಳುವ ವರೆಗೆ ಹಿಂದೂಗಳು ಶಾಂತವಾಗಿ ಕುಳಿತುಕೊಳ್ಳಬಾರದು !