ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ಘಟನೆ !
ಪ್ರಿಟೋರಿಯಾ (ದಕ್ಷಿಣ ಆಫ್ರಿಕಾ) – ಇಲ್ಲಿಯ ಬಿಳಿಯರಿಗಾಗಿ ಕಟ್ಟಿಸಿರುವ ಒಂದು ಈಜುಕೊಳದಲ್ಲಿ ೨ ಕಪ್ಪು ಹುಡುಗರು ಈಜುತ್ತಿರುವುದು ಕಂಡುಬಂದನಂತರ ಅವರಿಗೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಸ್ಥಳೀಯ ವಾರ್ತಾಜಾಲತಾಣದ ಅನುಸಾರ ಕಪ್ಪು ಕುಟುಂಬ ಕ್ರಿಸ್ ಮಸ್ ರಜೆ ಆಚರಿಸುವುದಕ್ಕಾಗಿ ದಕ್ಷಿಣ ಆಫ್ರಿಕಾದ ಫ್ರೀ ಸ್ಟೇಟ್ ನಲ್ಲಿ ಮೆಸೇಜ್ ಪೋರ್ಟ್ ರೆಸಾರ್ಟ್ ಗೆ ಹೋಗಿದ್ದರು. ಅಲ್ಲಿ ಕೆಲವು ಬಿಳಿಯ ಪುರುಷರಿಂದ ಈ ಕುಟುಂಬದ ೧೩ ಮತ್ತು ೧೮ ವರ್ಷದ ಕಪ್ಪು ಹುಡುಗರು ಇಲ್ಲಿನ ಈಜುಕೊಳದಲ್ಲಿ ಈಜುತ್ತಿರುವುದರಿಂದ ಅವರಿಗೆ ಅವಾಚ್ಯ ಪದಗಳಲ್ಲಿ ನಿಂದಿಸುತ್ತಾ ಥಳಿಸಿದರು. ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆರೋಪಿಗಳು ಓಡಿ ಹೋದರು.
A violent attack by a group of white men against two Black teenagers at a pool in South Africa has sparked widespread outrage and served as a stinging reminder of the lingering effects of apartheid. https://t.co/rQTooUeQRv
— New York Times World (@nytimesworld) December 28, 2022
ಸಂಪಾದಕೀಯ ನಿಲುವುಇಂತಹ ಘಟನೆಯ ಬಗ್ಗೆ ಅಮೇರಿಕಾ ಹಾಗೂ ಯುರೋಪಿನ ದೇಶಗಳು, ಅವರ ಮಾನವ ಹಕ್ಕುಗಳ ಸಂಘಟನೆಗಳು ಎಂದೂ ಬಾಯಿ ಬಿಡುವುದಿಲ್ಲ; ಆದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯದೇ ಇರುವ ಅತ್ಯಾಚಾರದ ಬಗ್ಗೆ ಹಿಂದೂಗಳನ್ನು ಗುರಿ ಮಾಡುವಲ್ಲಿ ಮಂಚೂಣಿಯಲ್ಲಿರುತ್ತಾರೆ ! |