ಗುಜರಾತ್ ನಲ್ಲಿ ಗಡಿ ಭದ್ರತಾ ಪಡೆಯ ಸೈನಿಕನ ಹತ್ಯೆ

ಸ್ವಂತ ಮಗಳ ಆಕ್ಷೇಪಾರ್ಹ ವಿಡಿಯೋ ಪ್ರಸಾರ ಮಾಡಿದ ಬಗ್ಗೆ ಕೇಳಿದಕ್ಕೆ ಹತ್ಯೆ

ಗಡಿ ಭದ್ರತಾ ಪಡೆಯ ಸೈನಿಕನನ್ನು ಹತ್ಯೆ ಮಾಡಿದ ಒಂದು ಕುಟುಂಬದ ೭ ಜನರನ್ನು ಪೊಲೀಸರು ಬಂಧಿಸಿದ್ದಾರೆ

ನದಿಯಾದ (ಗುಜರಾತ) – ಇಲ್ಲಿಯ ಮೇಲಜಿಭಾಯಿ ವಾಘೆಲಾ ಈ ಗಡಿ ಭದ್ರತಾ ಪಡೆಯ ಸೈನಿಕನನ್ನು ಒಂದು ಕುಟುಂಬವು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೭ ಜನರನ್ನು ಬಂಧಿಸಿದ್ದಾರೆ. ವಾಘೆಲಾ ಇವರ ಮಗಳ ಆಕ್ಷೇಪಾರ್ಹ ವಿಡಿಯೋವನ್ನು ಈ ಕುಟುಂಬದಲ್ಲಿನ ಓರ್ವ ೧೫ ವರ್ಷದ ಹುಡುಗನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದನು. ಇದರ ಬಗ್ಗೆ ಕೇಳಲು ವಾಘೆಲಾ ಇವರ ಪತ್ನಿ, ಇಬ್ಬರು ಮಕ್ಕಳು ಮತ್ತು ಸೋದರ ಸಂಬಂಧಿಯ ಜೊತೆಗೆ ಹೋಗಿದ್ದರು. ಆ ಸಮಯದಲ್ಲಿ ಹುಡುಗನ ಸಂಬಂಧಿಕರು ಅವರಿಗೆ ಬೈಗುಳ ನೀಡಿದ್ದರಿಂದ ವಿವಾದ ನಿರ್ಮಾಣವಾಗಿ ವಾಘೆಲಾ ಇವರಿಗೆ ಹೊಡೆಯಲಾಯಿತು. ಅದರಲ್ಲಿ ಅವರು ಮೃತಪಟ್ಟರು. ಆರೋಪಿ ಹುಡುಗ ವಾಘೆಲಾ ಇವರ ಮಗಳ ತರಗತಿಯಲ್ಲಿ ಓದುತ್ತಿದ್ದನು. ಈ ಇಬ್ಬರಲ್ಲಿ ಪ್ರೀತಿ ಇರುವ ವಿಷಯ ಬೆಳಕಿಗೆ ಬಂದಿದೆ.