ಗುರುಗ್ರಾಮ (ಹರಿಯಾಣ) ಇಲ್ಲಿ ಖಾಲಿ ಇರುವ ಜಾಗದಲ್ಲಿ ನಮಾಜ ಮಾಡುವವರನ್ನು ಹಿಂದೂ ಸಂಘಟನೆಗಳು ಓಡಿಸಿದರು !

ಗುರುಗ್ರಾಮ (ಹರಿಯಾಣ) – ಇಲ್ಲಿಯ ಸೆಕ್ಟರ್-೬೯ ರಲ್ಲಿ ಸಾರ್ವಜನಿಕ ಸ್ಥಳ ಇರುವ ಖಾಲಿ ಜಾಗದಲ್ಲಿ ಶುಕ್ರವಾರ, ಡಿಸೆಂಬರ್ ೨೩ ರಂದು ನಮಾಜ ಮಾಡಲು ಹಿಂದೂ ಸಂಘಟನೆಗಳು ವಿರೋಧಿಸಿದರು. ಅವರು ನಮಾಜಗೆ ಬಂದಿದ್ದ ಮುಸಲ್ಮಾನರನ್ನು ಓಡಿಸಿದರು. ಆ ಸಮಯದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ್ದರು. ಕೆಲವು ತಿಂಗಳ ಹಿಂದೆ ಇಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜ ಬಗ್ಗೆ ವಿವಾದ ನಡೆದಿತ್ತು. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿತ್ತು.

ಹಿಂದೂ ಸಂಘಟನೆಗಳು, ಇಲ್ಲಿ ಹೊರಗಿನಿಂದ ನೂರಾರು ಜನರನ್ನು ಕರೆಸಿ, ನಮಾಜ ಮಾಡಲಾಗುತ್ತದೆ. ಹಿಂದುಗಳ ವಿರುದ್ಧ ದೊಡ್ಡ ಷಡ್ಯಂತ್ರ ರೂಪಿಸಲಾಗಿದೆ. ಇಲ್ಲಿ `ಭೂಮಿ ಜಿಹಾದ್’ ಮಾಡಲಾಗುತ್ತಿದೆ. ನಾವು ಇಲ್ಲಿ ೧೫ ವರ್ಷಗಳಿಂದ ವಾಸಿಸುತ್ತಿದ್ದೇವೆ. ನಂತರ ಇಲ್ಲಿ ಗೋರಿ ಕಟ್ಟಿ ಮುಸಲ್ಮಾನರು `ಈ ಗೋರಿ ೨೫ ವರ್ಷಗಳ ಹಿಂದಿನಿಂದ ಇದೆ’ ಎಂದು ಹೇಳಿದ್ದಾರೆ. ಇಲ್ಲಿಯ ಖಾಲಿ ಜಾಗ ನಮಾಜಗಾಗಿ ನೀಡಲಾಗಿಲ್ಲ. ರಾಜ್ಯದ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ ಇವರು ಈ ಹಿಂದೆಯೇ, `ಖಾಲಿ ಜಾಗದಲ್ಲಿ ಯಾರು ನಮಾಜ ಮಾಡವಂತಿಲ್ಲ’, ಎಂದು ಆದೇಶ ನೀಡಿದ್ದಾರೆ. ಆದರೂ ಕೂಡ ಮುಸಲ್ಮಾನರು ಇಲ್ಲಿ ಸಮಾಜ ಮಾಡುವುದಕ್ಕಾಗಿ ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಖಾಲಿ ಜಾಗದಲ್ಲಿ ಅನುಮತಿ ಇಲ್ಲದೆ ನಮಾಜ ಮಾಡುವ ಧೈರ್ಯ ಹೇಗೆ ಬರುತ್ತದೆ ? ಪೊಲೀಸ ಮತ್ತು ಸರಕಾರ ನಿದ್ರಿಸುತ್ತಿದೆಯೆ ? ಹಿಂದೂ ಸಂಘಟನೆಗಳಿಗೆ ಈ ರೀತಿ ವಿರೋಧ ಏಕೆ ಮಾಡಬೇಕಾಗುತ್ತದೆ ? ಹರಿಯಾಣದಲ್ಲಿ ಭಾಜಪದ ಸರಕಾರ ಇರುವಾಗ ಈ ಸ್ಥಿತಿ ಬರಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !