ಮಂಗಳೂರಿನಲ್ಲಿ ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿಯ ಮೇಲೆ ಅನ್ಯ ಮತದ ವಿದ್ಯಾರ್ಥಿಗಳಿಂದ ಹಲ್ಲೆ

ಮಂಗಳೂರು (ಕರ್ನಾಟಕ) – ಅಯ್ಯಪ್ಪ ಮಾಲಾಧಾರಿ (ಅಯ್ಯಪ್ಪನ ವ್ರತದ ಸಮಯದಲ್ಲಿ ಧರಿಸಿದ್ದ ಮಾಲೆ) ವಿದ್ಯಾರ್ಥಿಯ ಮೇಲೆ ಇತರ ಮತದ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಕಪಿತಾನಿಯೋ ಶಾಲೆಯಲ್ಲಿನ ವಿದ್ಯಾರ್ಥಿಯ ಮೇಲೆ ಅದೇ ಶಾಲೆಯಲ್ಲಿಅ ಮೇಲ್ವರ್ಗದವರು ಈ ಹಲ್ಲೆ ನಡೆಸಿದ್ದಾರೆ. ಈ ಶಾಲೆಯ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ನಡುವೆ ಈ ಹಿಂದೆ ಹಲವು ಬಾರಿ ಹೊಡೆದಾಟ ನಡೆದಿತ್ತು. ಗಲಭೆ ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಎಚ್ಚರಿಕೆಯನ್ನೂ ನೀಡಿದ್ದರು; ಆದರೆ ವಿದ್ಯಾರ್ಥಿಗಳ ನಡುವೆ ಮತ್ತೆ ವಾಗ್ವಾದ ನಡೆದು ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಹಿಂದೂ ವಿದ್ಯಾರ್ಥಿಗಳು ಧರ್ಮಾಚರಣೆ ಮಾಡಿದರೆ ಇತರ ಮತದ ವಿದ್ಯಾರ್ಥಿಗಳು ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ, ಇದು ಅವರ ಹಿಂಸಾಚಾರ ಮಾನಸಿಕತೆಯನ್ನು ತೋರಿಸುತ್ತದೆ! ಇಂತಹ ವಿದ್ಯಾರ್ಥಿಗಳು ಎಷ್ಟೇ ಓದಿದರೂ ದೊಡ್ಡವರಾಗಿ ಅಪರಾಧ ಕೃತ್ಯಗಳನ್ನೇ ಮಾಡುವರು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ!