ತಾಜಮಹಲಗೆ ೨ ಎರಡು ಕೋಟಿ ರೂಪಾಯಿಯ ನೀರಿನ ಬಿಲ್ ಪಾವತಿಸುವಂತೆ ಮಹಾನಗರ ಪಾಲಿಕೆಯಿಂದ ನೋಟಿಸ್ !

ತಾಜಮಹಲ

ಆಗ್ರಾ (ಉತ್ತರಪ್ರದೇಶ) – ಇಲ್ಲಿಯ ಮಹಾಪಾಲಿಕೆಯಿಂದ ಪುರಾತತ್ವ ಇಲಾಖೆಗೆ ತಾಜಮಹಲಿನ ನೀರಿನ ಬಿಲ್ ಮತ್ತು ಆಸ್ತಿ ತೆರಿಗೆ ತುಂಬಲು ನೋಟಿಸ್ ಜಾರಿ ಮಾಡಿದೆ. ನೀರಿನ ಬಿಲ್ ೨ ಕೋಟಿ ರೂಪಾಯಿ ಹಾಗೂ ಆಸ್ತಿ ತೆರಿಗೆಗಾಗಿ ಒಂದೂವರೆ ಲಕ್ಷ ರೂಪಾಯಿ ತುಂಬಲು ಈ ನೋಟಿಸ್ ಜಾರಿ ಮಾಡಲಾಗಿದೆ. ಇನ್ನೊಂದು ಕಡೆಗೆ ಆಗ್ರಾ ಕೋಟೆಗಾಗಿ 5 ಕೋಟಿ ರೂಪಾಯಿ ಸೇವಾ ತೆರಿಗೆ ತುಂಬಲು ಸ್ಥಳೀಯ ಆಡಳಿತದಿಂದ ಹೇಳಲಾಗಿದೆ. ಈ ನೋಟೀಸ್ ೨೦೨೧-೨೨ ಮತ್ತು ೨೦೨೨-೨೩ ಈ ಆರ್ಥಿಕ ವರ್ಷಕ್ಕಾಗಿ ಇದೆ. ಪುರಾತತ್ವ ಇಲಾಖೆಗೆ ಈ ಹಣ ತುಂಬುವುದಕ್ಕಾಗಿ ೧೫ ದಿನದ ಕಾಲಾವಕಾಶ ಕೂಡ ನೀಡಲಾಗಿದೆ.

೧. ಐತಿಹಾಸಿಕ ವಾಸ್ತು, ರಾಷ್ಟ್ರೀಯ ಸ್ಮಾರಕ ಮುಂತಾದವುಗೆ ಈ ರೀತಿಯ ತೆರಿಗೆಯಲ್ಲಿ ರಿಯಾಯತಿ ನೀಡಲಾಗುತ್ತದೆ ಎಂದು ಆಗ್ರಾದ ಪುರಾತತ್ವ ಇಲಾಖೆ ಕಾರ್ಯಾಲಯದಿಂದ ಹೇಳಲಾಗಿದೆ; ಆದರೆ `ಅನೇಕ ಕಟ್ಟಡಗಳಿಗೆ ಈ ರೀತಿ ನೋಟಿಸ್ ಜಾರಿ ಮಾಡಲಾಗಿದೆ. ಇದರಿಂದ ರಿಯಾಯತಿ ನೀಡುವುದಕ್ಕಾಗಿ ಅರ್ಹರಿಗೆ ಈ ರಿಯಾಯತಿ ನೀಡಲಾಗುವುದೆಂದು’ ಮಹಾನಗರಪಾಲಿಗೆ ಆಯುಕ್ತ ನಿಖಿಲ ಫುಂಡೆ ಇವರು ಹೇಳಿದರು.

೨. ಪುರಾತತ್ವ ಇಲಾಖೆ ಆಗ್ರಾ ಸರ್ಕಲೀನ ಅಧೀಕ್ಷಕ ಮತ್ತು ಪುರಾತತ್ವ ತಜ್ಞ ರಾಜಕುಮಾರ ಪಟೇಲ್ ಇವರು, ಪುರಾತತ್ವ ಇಲಾಖೆ ದೇಶಾದ್ಯಂತ ಸುಮಾರು ೪ ಸಾವಿರ ರಾಷ್ಟ್ರೀಯ ಸ್ಮಾರಕಗಳನ್ನು ನಿರ್ವಹಣೆ ಮಾಡುತ್ತದೆ. ಈ ಹಿಂದೆ ಈ ರೀತಿಯ ಯಾವುದೇ ತೆರಿಗೆಯನ್ನು ತುಂಬಲು ಇಲಾಖೆಯಿಂದ ಎಂದೂ ಹೇಳಲಾಗಿರಲಿಲ್ಲ. ತಾಜಮಹಲ ಇದು ರಾಷ್ಟ್ರೀಯ ಸ್ಮಾರಕವಾಗಿದ್ದು ಅದಕ್ಕೆ ತೆರೆಗೆ ಅನ್ವಯಿಸುವುದಿಲ್ಲ. ಇಲ್ಲಿಯವರೆಗೆ ನೋಂದಣಿಯ ಪ್ರಕಾರ ಈ ರೀತಿಯ ನೋಟಿಸ್ ಮೊದಲ ಬಾರಿಗೆ ಜಾರಿ ಮಾಡಲಾಗಿದೆ ಎಂದು ಹೇಳಿದರು.