ಶ್ರೀನಗರದಲ್ಲಿ ಪ್ರಾಚೀನ ಮಸೀದಿಯ ಹಸಿರು ಹಾಸಿನ ಮೇಲೆ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಕುಳಿತುಕೊಳ್ಳಲು ನಿಷೇಧ !

ಜಾಮಿಯಾ ಮಸೀದಿ

ಶ್ರೀನಗರ (ಜಮ್ಮು-ಕಾಶ್ಮೀರ) – ಇಲ್ಲಿಯ ಜಾಮಿಯಾ ಮಸೀದಿಯ ಹಸಿರುಹಾಸಿನ ಮೇಲೆ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಕುಳಿತುಕೊಳ್ಳಲು ನಿಷೇಧ ಹೇರಲಾಗಿದೆ. ಈ ಮಸೀದಿಯೊಳಗೆ ಭಾವಚಿತ್ರಗಳನ್ನು ತೆಗೆಯುವುದನ್ನೂ ನಿಷೇಧಿಸಲಾಗಿದೆ. ವಿಶೇಷತೆಯೆಂದರ್ ಸಾಮಾನ್ಯವಾಗಿ ಮಸೀದಿಯೊಳಗೆ ಮಹಿಳೆಯರಿಗೆ ಪ್ರವೇಶ ಇರುವುದಿಲ್ಲ; ಆದರೆ ಈ ಮಸೀದಿಯಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಈ ಮಸೀದಿಯು 14 ನೇ ಶತಮಾನದ್ದಾಗಿದೆ. ಇಲ್ಲಿ  ಪ್ರತಿದಿನ ನೂರಾರು ಮುಸಲ್ಮಾನರು ನಮಾಜ್ ಮಾಡಲು ಬರುತ್ತಾರೆ.ಇಲ್ಲಿ ಒಂದೇ ಸಮಯದಲ್ಲಿ 30 ಸಾವಿರ ಜನರು  ನಮಾಜ್ ಮಾಡಬಹುದು.