ಕ್ರಿಸ್‌ಮಸ್ ವೇಳೆ ಹಿಂದೂಗಳ ದೇವರುಗಳನ್ನು ಸಾಂತಾ ಕ್ಲಾಸ್‌ ರೂಪದಲ್ಲಿ ತೋರಿಸಿದರೆ ಅಪರಾಧ ದಾಖಲಿಸುವೆವು ! – ಬಜರಂಗದಳದ ಎಚ್ಚರಿಕೆ

ನವ ದೆಹಲಿ – ಕ್ರೈಸ್ತರ ಹಬ್ಬವಾದ ಕ್ರಿಸ್‌ಮಸ್‌ನಲ್ಲಿ ಯಾರಾದರೂ ಹಿಂದೂ ದೇವತೆಗಳನ್ನು ಸಾಂತಾಕ್ಲಾಸ್‌ನಂತೆ ತೋರಿಸಲು ಪ್ರಯತ್ನಿಸಿದರೆ ಹಾಗೂ ದೇವತೆಗಳಿಗೆ ಅಂತಹ ವೇಶಭೂಷಣಗಳನ್ನು ಧರಿಸುವಂತೆ ತೋರಿಸಿದರೆ ಅಂತಹವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಬಜರಂಗದಳ ಎಚ್ಚರಿಸಿತು. ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ದೇವತೆಗಳನ್ನು ಸಾಂತಾಕ್ಲಾಸ್ ರೂಪದಲ್ಲಿ ತೋರಿಸುತ್ತಿರುವ ಹಿನ್ನಲೆಯಲ್ಲಿ ಬಜರಂಗದಳ ಈ ಎಚ್ಚರಿಕೆ ನೀಡಿದೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಅವರು ಹಿಂದೂಗಳ ದೇವರುಗಳನ್ನು ವಿಡಂಬನೆ ಮಾಡುತ್ತಾರೆ. ಹಾಗಾಗಿ ಈಗ ಹಿಂದೂಗಳ ಸಂಘಟನೆಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಪ್ರಯತ್ನಿಸಬೇಕು !