ಬಂಗಾಳದಲ್ಲಿ ಗೀತಾ ಜಯಂತಿ ನಿಮಿತ್ತದ ರಥಯಾತ್ರೆಯ ಮೇಲೆ ತೃಣಮೂಲ ಕಾಂಗ್ರೆಸ್ಸಿನ ಸಮರ್ಥಕರ ಆಕ್ರಮಣ.

  • ಅನೇಕ ಜನರು ಗಾಯಾಳು

  • ದೂರು ದಾಖಲಿಸಲು ಪೊಲೀಸರ ನಿರಾಕರಣೆ

  • ಆಕ್ರಮಣಕಾರರನ್ನು ವಿರೋಧಿಸುವ ಹಿಂದೂಗಳ ಮೇಲೆಯೇ ಪೊಲೀಸರಿಂದ ಲಾಠಿಚಾರ್ಜ

ದಕ್ಷಿಣ 24 ಪರಗಣಾ(ಬಂಗಾಳ)– ಇಲ್ಲಿಯ ಬೇತಬೇರಿಯಾ ಪ್ರದೇಶದಲ್ಲಿ ಪ್ರತಿವರ್ಷ ಗೀತಾ ಜಯಂತಿ ಉತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷ ಡಿಸೆಂಬರ 11 ರಂದು ಗೀತಾ ಜಯಂತಿಯ ನಿಮಿತ್ತ ನಡೆಸಲಾದ ರಥಯಾತ್ರೆಯ ಮೇಲೆ ಕೆಲವರು ಆಕ್ರಮಣ ಮಾಡಿದರು. ಇದರಲ್ಲಿ ಕೆಲವು ಹಿಂದೂಗಳು ಗಾಯಾಳುಗಳಾಗಿದ್ದಾರೆಂದು ಭಾಜಪ ಮುಖಂಡ ಮತ್ತು ರಾಜ್ಯದ ವಿರೋಧಪಕ್ಷದ ಅಧ್ಯಕ್ಷರಾಗಿರುವ ಶಾಸಕ ಶುಭೇಂದು ಅಧಿಕಾರಿಯವರು ಮಾಹಿತಿ ನೀಡಿದ್ದಾರೆ. ಈ ಆಕ್ರಮಣದ ಹಿಂದೆ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರ ಕೈವಾಡವಿದೆಯೆಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆಂದು ಅವರು ಹೇಳಿದರು.

೧. ಶಾಸಕರಾದ ಅಧಿಕಾರಿಯವರು ಟ್ವೀಟ ಮಾಡುತ್ತಾ, ತೃಣಮೂಲ ಕಾಂಗ್ರೆಸ್ಸಿನ ಗೂಂಡಾಗಳು ಮೊದಲು ರಸ್ತೆಯನ್ನು ಬಂದ್ ಮಾಡಿ ರಥಯಾತ್ರೆಯನ್ನು ನಿಲ್ಲಿಸಿದರು. ತದನಂತರ ಕಬ್ಬಿಣದ ಸಲಾಕೆ, ತಲವಾರ ಮತ್ತು ಕೋಲುಗಳ ಮೂಲ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರ ಮೇಲೆ ಆಕ್ರಮಣ ನಡೆಸಿದರು. ಇದು ಅತ್ಯಂತ ನಿಯೋಜನೆಬದ್ಧವಾಗಿ ನಡೆಸಲಾಗಿದೆ. ಇದರಲ್ಲಿ ಕೆಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕ್ರಮಣಕಾರರನ್ನು ವಿರೋಧಿಸಿದ ಹಿಂದೂಗಳ ಮೇಲೆಯೇ ಪೊಲೀಸರು ಲಾಠೀಚಾರ್ಜ ಮಾಡಿದರು. ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಷ್ಟು ಕೆಟ್ಟದಾಗಿದೆಯೆಂದರೆ, ಭಕ್ತರು ರಥಯಾತ್ರೆಯನ್ನೂ ಮಾಡಲು ಸಾಧ್ಯವಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

೨. ಭಾಜಪದ ಪ್ರದೇಶಾಧ್ಯಕ್ಷ ಸುಕಾಂತ ಮಜುಮದಾರ ಇವರೂ ಕೂಡ `ಈ ಆಕ್ರಮಣದ ಹಿಂದೆ ತೃಣಮೂಲ ಕಾಂಗ್ರೆಸ್ಸಿನ ಸಮರ್ಥಕರು ಇದ್ದರು. ಅವರ ಕೈಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಧ್ವಜಗಳಿದ್ದವು’ ಎಂದು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಇನ್ನೆಷ್ಟು ದಿನಗಳ ವರೆಗೆ ಬಂಗಾಳದಲ್ಲಿ ಭಾಜಪದ ಕಾರ್ಯಕರ್ತರು ಮತ್ತು ಹಿಂದೂಗಳು ಹೊಡೆತಗಳನ್ನು ಸಹಿಸಿಕೊಳ್ಳುವರು? ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವ ಧೈರ್ಯವನ್ನು ಎಂದಿಗೆ ತೋರಿಸುವರು? ಎನ್ನುವ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಏಳುತ್ತದೆ.