ಹರಿಯಾಣದಲ್ಲಿನ ಮಹಾವಿದ್ಯಾಲಯದ ಗೋಡೆಯ ಮೇಲೆ ಬರೆಯಲಾದ  ಖಲಿಸ್ತಾನ ಜಿಂದಾಬಾದ್ ಮತ್ತು ಬ್ರಾಹ್ಮಣ ವಿರೋಧಿ ಘೋಷಣೆ!

ಹರಿಯಾಣದಲ್ಲಿನ ಮಹಾವಿದ್ಯಾಲಯದ ಗೋಡೆಯ ಮೇಲೆ ಬರೆಯಲಾದ  ಖಲಿಸ್ತಾನ ಜಿಂದಾಬಾದ್ ಮತ್ತು ಬ್ರಾಹ್ಮಣ ವಿರೋಧಿ ಘೋಷಣೆ!

ಸಿರಸಾ (ಹರಿಯಾಣ): ಇಲ್ಲಿಯ ಡಾ. ಬಿ .ಆರ್ .ಅಂಬೇಡ್ಕರ ಮಹಾವಿದ್ಯಾಲಯದ ಹೊರಗಿನ ಗೋಡೆಗಳ ಮೇಲೆ ೬ ಸ್ಥಳಗಳಲ್ಲಿ ಖಲಿಸ್ತಾನ  ಜಿಂದಾಬಾದ್ ಹಾಗೂ ಬ್ರಾಹ್ಮಣರೇ, ಪಂಜಾಬ ಮತ್ತು ಹರಿಯಾಣ ಬಿಟ್ಟು ಹೊರಡಿರಿ, ಈ ಪ್ರಕರಣದಲ್ಲಿ ನಿಷೇಧಿತ ಖಲಿಸ್ತಾನ ಭಯೋತ್ಪಾದಕ ಸಂಘಟನೆ ಸಿಖ್ ಫಾರ್ ಜಸ್ಟ್ ಸ್ ಇದರ ಪ್ರಮುಖ ಗುರುಪತವಂತ ಸಿಂಹ ಪನ್ನು ಇವನ ವಿರುದ್ಧ ದೂರು ದಾಖಲಿಸಲಾಗಿದೆ.೧೯೮೪ ರಲ್ಲಿ ಸಿಖ್ ವಿರೋಧಿ ದಂಗೆಗಾಗಿ ಬ್ರಾಹ್ಮಣರನ್ನು ಜವಾಬ್ದಾರರೆಂದು ಹೇಳುವ ಪ್ರಯತ್ನಿಸಲಾಗಿತ್ತು. ದೆಹಲಿಯಲ್ಲಿನ ಜವಾಹರ ಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಷ್ಟೇ ಬ್ರಾಹ್ಮಣ ವಿರೋಧಿ ಘೋಷಣೆ ಬರೆಯಲಾಗಿತ್ತು.

ಪನ್ನು ಇವನು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಪ್ರಸಾರ ಮಾಡಿದ್ದಾನೆ. ಅದರಲ್ಲಿ ಈ ಗೋಡೆಗಳ ಮೇಲೆ ಬರೆಯಲಾದ ಘೋಷಣೆ ತೋರಿಸಲಾಗಿದೆ. ಇದರಲ್ಲಿ ಅವನು ಹರಿಯಾಣ ಇದು ಪಂಜಾಬಿನ ಭಾಗ ಎಂದು ಹೇಳುತ್ತಾ ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್ ಇವರಿಗೆ ಸವಾಲು ನೀಡಿದ್ದಾನೆ.

ಸಂಪಾದಕೀಯ ನಿಲುವು

ಖಲಿಸ್ತಾನೀ ಭಯೋತ್ಪಾದಕರ ಕಾರ್ಯ ಚಟುವಟಿಕಗಳು ಕೇವಲ ಪಂಜಾಬಿಗಷ್ಟೇ ಸೀಮಿತವಾಗಿಲ್ಲ  ಪಕ್ಕದ ಹರಿಯಾಣದಲ್ಲಿ ಕೂಡ ಭಯೋತ್ಪಾದಕ ಚಟುವಟಿಕೆ ಪ್ರಾರಂಭವಾಗಿದೆ ಎಂಬುದು ಇದರಿಂದ ತಿಳಿದು ಬರುತ್ತಿದೆ. ಆದ್ದರಿಂದ ಈಗ ಕೇಂದ್ರ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದೆ!