ಅಲಿಗಡ (ಉತ್ತರಪ್ರದೇಶ) – ಇಲ್ಲಿಯ ಅಲಿಗಡ ವಿದ್ಯಾಪೀಠದಲ್ಲಿನ ಮುಸಲ್ಮಾನ ವಿದ್ಯಾರ್ಥಿಗಳು ಬಾಬ್ರಿ ಮಸೀದಿ ಧ್ವಂಸಗೊಳಿಸಿರುವ ಡಿಸೆಂಬರ್ ೬ ಇದನ್ನು `ಕಪ್ಪು ದಿನ’ವೆಂದು ಆಚರಿಸಿದರು. ಈ ಸಮಯದಲ್ಲಿ ಅವರು `ಈ ಭೂಮಿ ಅಲ್ಲಾಹನದು ಇಲ್ಲಿಯ ಎಲ್ಲಾ ಮೂರ್ತಿಗಳು ತೆರೆವು ಗೊಳಿಸಲಾಗುವುದು’, ಎಂದು ಬೆದರಿಕೆ ನೀಡಿದರು. ಇದರ ಜೊತೆಗೆ ಈ ವಿದ್ಯಾರ್ಥಿಗಳ `ಬಾಬರಿ ಮಸೀದಿ ಇತ್ತು, ಇದೆ ಮತ್ತು ಭವಿಷ್ಯದಲ್ಲಿ ಕೂಡ ಇರುತ್ತದೆ’ ಎಂದು ಘೋಷಣೆ ಕೂಗಿದರು.
‘यह जमीन अल्लाह की… यहाँ से सभी बुत (मूर्तियाँ) उठवा दी जाएँगी’: अलीगढ़ यूनिवर्सिटी में लगे नारे-पोस्टर… चुनावी नतीजों के बीच भुला दी गई खबर#AMU https://t.co/2Nip8Kt9BZ
— ऑपइंडिया (@OpIndia_in) December 8, 2022
ಡಿಸೆಂಬರ್ ೬, ೨೦೨೨ ದಿನದಂದು ವಿದ್ಯಾಪೀಠದ ವಿದ್ಯಾರ್ಥಿ ನಾಯಕ ಮಹಮ್ಮದ್ ಫರೀದ ಇವನ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳು ಕೈಯಲ್ಲಿ ಫಲಕ ಹಿಡಿದು ವಿದ್ಯಾಪೀಠ ಪರಿಸರದಲ್ಲಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಆತ, “ಬಾಬರಿ ಮಸೀದಿ ಎಂದಿಗೂ ನಾಶ ಮಾಡಲು ಸಾಧ್ಯವಿಲ್ಲ ಅದು ಶಾಶ್ವತವಾಗಿರುವುದು. ಒಂದು ದಿನ ಅಲ್ಲಾಹನ ಈ ಭೂಮಿಯಿಂದ ಎಲ್ಲಾ ಮೂರ್ತಿಗಳು ತೆರೆವು ಗೊಳಿಸಲಾಗುವುದು ಮತ್ತು ಕೇವಲ ಅಲ್ಲಾಹನ ಹೆಸರು ಉಳಿಯುವುದು.” ಎಂದು ಹೇಳಿದನು.
ಪೊಲೀಸರು ಈ ಪ್ರಕರಣದ ಅನ್ವೇಷಣೆ ನಡೆಸಬೇಕು ! – ಭಾಜಪ
ಈ ವಿಷಯವಾಗಿ ಅಲಿಗಡ ಇಲ್ಲಿಯ ಭಾಜಪದ ಜಿಲ್ಲಾ ಉಪಾಧ್ಯಕ್ಷ ಗೌರವ ಶರ್ಮ ಇವರು, ಸರ್ವೋಚ್ಚ ನ್ಯಾಯಾಲಯವು ಡಿಸೆಂಬರ್ ೬ ರಂದು ಕಪ್ಪು ದಿನ ಆಚರಿಸಲು ನಿಷೇಧಿಸಿದೆ. ಆದರೂ ಕೂಡ ಅಲಿಗಡ ವಿದ್ಯಾಪೀಠದಲ್ಲಿ ಈ ದಿನ ಆಚರಿಸಲಾಗಿದೆ. ಪೊಲೀಸರು ಈ ಪ್ರಕರಣದ ಅನ್ವೇಷಣೆ ನಡೆಸಬೇಕೆಂದು ಹೇಳಿದರು.
ಸಂಪಾದಕೀಯ ನಿಲುವು
|