ದಟ್ಟ ಮಂಜಿನಿಂದಾಗಿ ಭಾರತೀಯ ಯೋಧ ಗಡಿ ದಾಟಿದ್ದರಿಂದ ಪಾಕಿಸ್ತಾನ ಸೇನೆ ಹಿಡಿದರು !

ಒಂದು ವಾರದಲ್ಲಿ ಎರಡನೆಯ ಘಟನೆ !

ಫಿರೋಜಪುರ (ಪಂಜಾಬ) – ಇಲ್ಲಿನ ಅಬೋಹರ ಪ್ರದೇಶದಲ್ಲಿ ದಟ್ಟವಾದ ಮಂಜಿನಿಂದಾಗಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿದ ಗಡಿ ಭದ್ರತಾ ಪಡೆಯ ಯೋಧನೊಬ್ಬನು ಪಾಕಿಸ್ತಾನ ಸೇನೆಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಪಾಕಿಸ್ತಾನ ಸೈನಿಕರು ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಸಿದ್ಧರಾಗಿಲ್ಲ. ಕೆಲ ದಿನಗಳ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು. ಆ ಸಮಯದಲ್ಲಿ ಪಾಕಿಸ್ತಾನ ಸೈನ್ಯವು ಭಾರತೀಯ ಸೈನಿಕನನ್ನು ಬಿಟ್ಟಿತ್ತು.

ಭಾರತೀಯ ಸೈನಿಕರು ಇಲ್ಲಿ ಗಡಿಯಲ್ಲಿ ನಿಯಮಿತವಾಗಿ ಗಸ್ತು ತಿರುಗುತ್ತಾರೆ. ಈ ಬಾರಿ ಮಂಜು ಮುಸುಕಿದ ವಾತಾವರಣವಿದ್ದು, ಯೋಧನು ಶೂನ್ಯ ರೇಖೆಯನ್ನು ದಾಟಿದನು ಮತ್ತು ಆತನು ಕಣ್ಮರೆಯಾಗಿರುವುದು ಇತರ ಸೈನಿಕರ ಗಮನಕ್ಕೆ ಬರಲೇ ಇಲ್ಲ. ಸ್ವಲ್ಪ ಸಮಯದ ನಂತರ, ಅವರು ಒಟ್ಟುಗೂಡಿದಾಗ, ಒಬ್ಬ ಸೈನಿಕನು ಕಾಣೆಯಾಗಿರುವುದು ಅವರ ಗಮನಕ್ಕೆ ಬಂದಿತು. ಆ ಬಳಿಕ ಪಾಕಿಸ್ತಾನದ ಗಡಿಯೊಳಗೆ ನುಗ್ಗಿದ್ದರಿಂದ ಪಾಕಿಸ್ತಾನದ ಸೈನಿಕರು ಆತನನ್ನು ಬಂಧಿಸಿದ್ದಾರೆಂಬುದು ಅವರಿಗೆ ತಿಳಿಯಿತು.