ಬಲವಂತವಾಗಿ ಅಥವಾ ಮೋಸದಿಂದ ಮಾಡಿರುವ ಮತಾಂತರ ಇದು ಗಂಭೀರ ಅಂಶ ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಬಲವಂತವಾಗಿ ಮತಾಂತರಗೊಳಿಸಿರುವ ಪ್ರಕರಣದ ಒಂದು ಮನವಿಯ ಬಗ್ಗೆ ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸವಿಸ್ತಾರವಾದ ಪ್ರತಿಜ್ಞಾ ಪತ್ರ ಪ್ರಸ್ತುತಪಡಿಸಲು ಹೇಳಿದೆ. ಬಲವಂತವಾಗಿ ಅಥವಾ ಮೋಸ ಮಾಡಿ ಮತಾಂತರಗೊಳಿಸುವುದು ಇದು ಗಂಭೀರ ಅಂಶವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಬಲವಂತವಾಗಿ ಮಾಡಲಾಗುತ್ತಿರುವ ಮತಾಂತರದ ಸಂದರ್ಭದಲ್ಲಿ ಭಾಜಪದ ನಾಯಕ ಮತ್ತು ನ್ಯಾಯವಾದಿ (ಶ್ರೀ) ಅಶ್ವಿನಿ ಕುಮಾರ್ ಉಪಾಧ್ಯಾಯ ಇವರ ಮನವಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ ೧೨ ರಿಂದ  ನಡೆಯಲಿದೆ.

ನ್ಯಾಯಮೂರ್ತಿ ಎಂ ಆರ್ ಶಾಹ ಮತ್ತು ನ್ಯಾಯಮೂರ್ತಿ ಸಿ.ಟಿ. ರವಿ ಕುಮಾರ್ ಇವರ ಖಂಡಪೀಠದಿಂದ ಮತಾಂತರದ ಪ್ರಕರಣದ ಬಗ್ಗೆ ವಿಚಾರಣೆ ಮಾಡುವಾಗ, ದಾನ ಮತ್ತು ಸಮಾಜ ಸೇವೆ ಇದು ಒಳ್ಳೆಯ ವಿಷಯವಾಗಿದೆ. ಆದರೆ ಮತಾಂತರದ ಹಿಂದೆ ಯಾವುದೇ ಗೌಪ್ಯ ಉದ್ದೇಶ ಇರಬಾರದು. ದೇಶದಲ್ಲಿ ಬಲವಂತವಾಗಿ ನಡೆಯುವ ಮತಾಂತರ ತಡೆಯುವುದಕ್ಕಾಗಿ ಯೋಗ್ಯವಾದ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳಿದೆ. ಸಮಾಜದಲ್ಲಿನ ದುರ್ಬಲರಿಗೆ ರಕ್ಷಣೆ ನೀಡುವುದಕ್ಕಾಗಿ ಮತಾಂತರ ವಿರೋಧಿ ಕಾನೂನಿನ ಅವಶ್ಯಕತೆ ಇರುವುದರ  ಬಗ್ಗೆ  ಕೇಂದ್ರ ಸರಕಾರವು ಸ್ಪಷ್ಟಪಡಿಸಿದೆ .