-
ಸ್ವಿಜರ್ಲ್ಯಾಂಡನ ಕಂಪನಿಯ ನಿಷ್ಕರ್ಷ !
-
ಬಾಂಗಲಾದೇಶ ೧ ನೇ ಸ್ಥಾನದಲ್ಲಿ ಹಾಗೂ ಪಾಕಿಸ್ತಾನ ೩ ನೇ ಸ್ಥಾನದಲ್ಲಿ !
ನವ ದೆಹಲಿ – ವಾಯುವಿನ ಗುಣಮಟ್ಟದ ಬಗ್ಗೆ ನಿಗಾವಹಿಸಲು `ಐಕ್ಯೂ ಏರ’ ಈ ಸ್ವಿಜರ್ಲ್ಯಾಂಡಿನಲ್ಲಿನ ‘ಪೊಲ್ಯೂಷನ್ ಟೆಕ್ನಾಲಜಿ ಕಂಪನಿ’ಯು ಜಗತ್ತಿನಾದ್ಯಂತ ವಾಯುಮಾಲಿನ್ಯದ ದೇಶದ ಪಟ್ಟಿ ತಯಾರಿಸಿದೆ. ೨೦೨೧ ರಲ್ಲಿ ಇದರ ಅಭ್ಯಾಸ ಮಾಡಿ ಸಿದ್ಧಪಡಿಸಲಾಗಿರುವ ಸೂಚಿಯಲ್ಲಿ ಭಾರತ ೫ ನೇ ಸ್ಥಾನದಲ್ಲಿ ಹಾಗೂ ಬಾಂಗ್ಲಾದೇಶ ಮೊದಲ ಸ್ಥಾನದಲ್ಲಿದೆ. ಈ ಸೂಚಿಯಲ್ಲಿ ಭಾರತದ ರಾಜಧಾನಿ ದೆಹಲಿಯ ಸಹಿತ ದೇಶದಲ್ಲಿನ ಅನೇಕ ಪ್ರಮುಖ ನಗರಗಳ ಹೆಸರು ಇವೆ. ತಾಜಿಕಿಸ್ತಾನ್ ೪ ನೇ ಸ್ಥಾನದಲ್ಲಿ ಅತ್ಯಧಿಕ ವಾಯುಮಾಲಿನ್ಯ ಇರುವ ದೇಶವೆಂದು ಸೇರಿಸಲಾಗಿದೆ.
Northern #India experiences some of the worst #air quality in the world at this time of year. Learn more by reading the World Air Quality Report.https://t.co/12ysqaaY1v pic.twitter.com/diOqBOHFmz
— IQAir (@IQAir) December 2, 2022
ಸಿಮೆಂಟ್ ಮತ್ತು ಕಲ್ಲಿದ್ದಲು ಶಕ್ತಿ ಪ್ರಕಲ್ಪದಿಂದಾಗಿ ಇಲ್ಲಿ ಎಲ್ಲಕ್ಕಿಂತ ಹೆಚ್ಚು ವಾಯುಮಾಲಿನ್ಯ ಆಗಿದೆ. ಪಾಕಿಸ್ತಾನ ಇದು ಮೂರನೇ ಕ್ರಮಾಂಕದ ವಾಯುಮಾಲಿನ್ಯದ ದೇಶವಾಗಿದೆ. ವಾಯು ಮಾಲಿನ್ಯದಿಂದ ಇಲ್ಲಿಯ ನಾಗರೀಕರ ಆಯಷ್ಯ ೪ ವರ್ಷ ಕಡಿಮೆಯಾಗಿದೆ. ಆಫ್ರಿಕಾದಲ್ಲಿನ `ಚಾಡ’ ಇದು ಜಗತ್ತಿನ ೨ ನೇ ಸ್ಥಾನದ ವಾಯುಮಾಲಿನ್ಯ ಇರುವ ದೇಶವಾಗಿದೆ. ಈ ದೇಶದಲ್ಲಿ ಸ್ವಚ್ಛತೆಯ ಅಭಾವ ಮತ್ತು ಅಪೌಷ್ಠಿಕೆತೆಯ ನಂತರ ವಾಯುಮಾಲಿನ್ಯ ಇದು ಮೂರನೇಯ ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಆಗಿದೆ. ೨೦೧೭ ರಲ್ಲಿ ಈ ದೇಶದ ೧೪ ಸಾವಿರ ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ.
ಸಂಪಾದಕೀಯ ನಿಲುವುವಿದೇಶಿ ಕಂಪನಿಗಳಿಂದ ಸಿದ್ಧಪಡಿಸಿರುವ ಈ ರೀತಿಯ ವರದಿಯಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶ ಇರುತ್ತದೆ. ಇದರ ಬಗ್ಗೆ ಕೂಡ ಇನ್ನೂ ಸಮೀಕ್ಷೆ ನಡೆಯುವುದು ಅವಶ್ಯಕವಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಯುಮಾಲಿನ್ಯವಿದೆ ಇದು ಸಾರ್ವಜನಿಕವಾಗಿರುವಾಗ ಅಭಿವೃದ್ಧಿಶೀಲ ದೇಶಗಳಿಗೆ ಉದ್ದೇಶಕ್ಕಾಗಿ ಮಾಲಿನ್ಯಕ್ಕಾಗಿ ಗುರಿ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ! |