ಇಸ್ರಾಯಿಲ್ ನಿರ್ದೇಶಕ ಲ್ಯಾಪಿಡ್ ಇವರು ‘ಕಾಶ್ಮೀರ್ ಫೈಲ್ಸ್’ ವಿಷಯದ ಹೇಳಿಕೆಗೆ ಬೇರೆ ೩ ಪರೀಕ್ಷಕರ ಬೆಂಬಲ !

ನವ ದೆಹಲಿ – ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ತೋರಿಸಲಾದ `ಕಾಶ್ಮೀರ್ ಫೈಲ್ಸ್’ ಈ ಚಲನಚಿತ್ರದಲ್ಲಿ ಸತ್ಯ ಇಲ್ಲ ಎಂದು ಇಸ್ರಾಯಿಲಿನ ಚಲನಚಿತ್ರ ನಿರ್ದೇಶಕ ಮತ್ತು ಮಹೋತ್ಸವದಲ್ಲಿನ ೫ ಸದಸ್ಯರನೊಳಗೊಂಡ ಪರೀಕ್ಷಕ ಮಂಡಳದ ಅಧ್ಯಕ್ಷ ನದಾವ್ ಲ್ಯಾಪಿಡ್ ಇವರು ಟೀಕೆಸಿದ್ದರು. ಅದರ ಬಗ್ಗೆ ಅವರ ಮೇಲೆ ಟೀಕೆಗಳು ಆದ ನಂತರ ಅವರು ಕ್ಷಮೆ ಯಾಚಿಸಿದ್ದರು. ಆದರೂ ಈ ಪ್ರಕರಣ ಇಲ್ಲೇ ನಿಲ್ಲಲಿಲ್ಲ. ಈಗ ಈ ಮಹೋತ್ಸವದ ಪರೀಕ್ಷಕರಲ್ಲಿ ೩ ಪರೀಕ್ಷಕರು ಲ್ಯಾಪಿಡ್ ಇವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಈ ಹಿಂದೆ ೫ ಪರೀಕ್ಷಕರಲ್ಲಿ ಸುದಿಪ್ತೋ ಸೇನ್ ಇವರು ಅವರ ಈ ಹೇಳಿಕೆಗೆ ಬೆಂಬಲ ಇಲ್ಲದಿರುವುದು ಸ್ಪಷ್ಟಪಡಿಸಿದ್ದರು.

ಪರೀಕ್ಷಕ ಮಂಡಳದ ಮೇಲೆ ಜಿಂಕೋ ಗೋಟೋಹ ಇವರು ಟ್ವೀಟ್ ಮಾಡಿ, ಇಂತಹ ಕಲಾತ್ಮಕ ಮಹೋತ್ಸವದಲ್ಲಿ ೧೫ ನೇ ಸ್ಥಾನದಲ್ಲಿ ತೋರಿಸಿರುವ `ಕಾಶ್ಮೀರ್ ಫೈಲ್ಸ್’ ಇದು ಪ್ರಚಾರಕ್ಕಾಗಿ ನಿರ್ಮಿಸಿರುವ ಚಲನಚಿತ್ರ ನೋಡಿ ನಮಗೆ ಆಘಾತವಾಯಿತು. ಈ ಮಹೋತ್ಸವದಲ್ಲಿ ಇದನ್ನು ಸೇರಿಸುವುದು ಅಯೋಗ್ಯವಾಗಿದೆ. ನಾನು ಮತ್ತು ಇತರ ಇಬ್ಬರು (ಫ್ರಾನ್ಸಿನ ಚಲನಚಿತ್ರ ನಿರ್ಮಾಪಕ ಮತ್ತು ಪತ್ರಕರ್ತ ಜಾಹ್ವಿರ ನ್ಯೂಲೋ ಬಾರ್ತುರೆನ್ ಮತ್ತು ಫ್ರೆಂಚ್ ಚಲನಚಿತ್ರ ಸಂಕಲಕ ಪಾಸ್ಕಲ್ ಚೌಹ್ವಾನ್ಸ್) ಲ್ಯಾಪಿಡ್ ಇವರ ಅಭಿಪ್ರಾಯವನ್ನು ಬೆಂಬಲಿಸಿದರು. ನಮ್ಮ ಈ ಅಭಿಪ್ರಾಯ ಎಂದರೆ ಈ ಚಲನಚಿತ್ರದಲ್ಲಿ ಏನು ತೋರಿಸಲಾಗಿದೆ ಅದರ ಬಗ್ಗೆ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ, ಕೇವಲ ಕಲಾತ್ಮಕ ದೃಷ್ಟಿಯಿಂದ ಮಂಡಿಸಿರುವ ವಿಚಾರವಾಗಿದೆ. ಚಲನಚಿತ್ರ ಮಹೋತ್ಸವದ ವೇದಿಕೆಯ ಉಪಯೋಗ ರಾಜಕೀಯಕ್ಕಾಗಿ ಆಗುವುದು ಮತ್ತು ಅದರ ನಂತರ ನದಾವ್ ಇವರ ಬಗ್ಗೆ ವೈಯಕ್ತಿಕ ಟೀಕೆಗಳ ಸುರಿಮಳೆ ಆಗುವುದು ಇದು ದುಃಖಕರವಾಗಿದೆ. ನಮ್ಮ ಪರೀಕ್ಷಕರ ಉದ್ದೇಶ ಹಾಗಿರಲಿಲ್ಲ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಲ್ಯಾಪಿಡ್ ಇವರು ತಮ್ಮ ಹೇಳಿಕೆಯ ಬಗ್ಗೆ ಕ್ಷಮೆ ಕೇಳಿದ ನಂತರ ಮತ್ತೆ ಈ ರೀತಿಯ ೩ ಪರೀಕ್ಷಕರ ಹೇಳಿಕೆ ಎಂದರೆ ಇದು ಒಂದು ದೊಡ್ಡ ಸಂಚಿನ ಭಾಗವಾಗಿದೆ, ಎಂದು ಅನಿಸುತ್ತದೆ ! ಈಗ ಇದರ ಬಗ್ಗೆ ಕೇಂದ್ರ ಸರಕಾರ ಹುಡುಕುವುದು ಅವಶ್ಯಕವಾಗಿದೆ !