ನವದೆಹಲಿ – ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.) 2021 ರಲ್ಲಿ ಪಂಜಾಬ್ ನ ಲುಧಿಯಾನಾದ ನ್ಯಾಯಾಲಯದ ಕಟ್ಟಡದಲ್ಲಿ ನಡೆದ ಬಾಂಬ ಸ್ಫೋಟದ ಪ್ರಕರಣದಲ್ಲಿ ಪರಾರಿಯಾಗಿದ್ದ ಹರಪ್ರೀತ ಸಿಂಹ ಉರ್ಫ ಹ್ಯಾಪ್ಪಿ ಈ ಖಲಿಸ್ತಾನಿ ಭಯೋತ್ಪಾದಕನನ್ನು ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪರಿಸರದಲ್ಲಿ ಬಂಧಿಸಲಾಯಿತು. ಈ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರೇ 6 ಜನರು ಗಾಯಗೊಂಡಿದ್ದರು. ಈ ಹಿಂದೆಯೂ ಎನ್.ಐ.ಎ.ಯು ಹರಪ್ರೀತ ಸಿಂಹ ಇವನ ಮೇಲೆ 10 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಲಾಗಿತ್ತು. ಈ ಪ್ರಕರಣದಲ್ಲಿ ಈ ಹಿಂದೆಯೂ ನಾಲ್ವರನ್ನು ಬಂಧಿಸಲಾಗಿದೆ.
#NIA detains fugitive terrorist #HarpreetSingh who was the mastermind behind #ludhianacourtblast https://t.co/S43iKHv51f
— Zee News English (@ZeeNewsEnglish) December 2, 2022
ಎನ್.ಐ.ಎ.ಯು, ಪಾಕಿಸ್ತಾನ ಸ್ಥಾಪಿಸಿರುವ ಇಂಟರನ್ಯಾಶನಲ ಸಿಖ್ಕ ಯೂತ್ ಫೆಡರೇಶನ ಮುಖಂಡ ಹರಪ್ರೀತ ಇವನು ಲಖಬೀರ ಸಿಂಹ ರೋಡೆ ಇವರ ಸಹಚರನಾಗಿದ್ದಾನೆ. ಅವನು ಲೂಧಿಯಾನ ನ್ಯಾಯಾಲಯದ ಬಾಂಬ ಸ್ಫೋಟದ ಪ್ರಮುಖ ಸೂತ್ರಧಾರ ಆಗಿದ್ದಾನೆ. ರೋಡೆಯ ಸೂಚನೆಯನುಸಾರ ಹರಪ್ರೀತ ಬಾಂಬ ವಿತರಣೆಗಾಗಿ ಸಹಾಯ ಮಾಡಿದ್ದನು. ಈ ಬಾಂಬ ಪಾಕಿಸ್ತಾನದಿಂದ ಭಾರತಕ್ಕೆ ರೋಡೆಯ ಸಹಚರನಿಗೆ ಕಳುಹಿಸಲಾಗಿತ್ತು.
ಸಂಪಾದಕೀಯ ನಿಲುವುಮಲೇಷ್ಯಾ ಭಾರತ ವಿರೋಧಿ ದೇಶವಾಗಿದೆ. ಅಲ್ಲಿ ಭಾರತದಲ್ಲಿನ ಭಯೋತ್ಪಾದಕರು ಅಡಗಿ ಕುಳಿತಿರುವ ಕಾರಣ ಭಾರತ ಮಲೇಷ್ಯಾವನ್ನು ಛೀಮಾರಿ ಹಾಕಬೇಕಾಗಿದೆ ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ ! |