ಇಲಿಯನ್ನು ಅಮಾನವೀಯ ರೀತಿಯಲ್ಲಿ ಕೊಂದಿರುವ ಪ್ರಕರಣದಲ್ಲಿ ಯುವಕನ ವಿರುದ್ಧ ದೂರು

ಪಶು ಪ್ರೇಮಿಯ ದೂರಿನ ನಂತರ ಪೊಲೀಸರು ಸಂಬಂಧಪಟ್ಟವನ ೧೦ ಗಂಟೆಗಳ ಕಾಲ ವಿಚಾರಣೆ

ಬದಾಯು (ಉತ್ತರಪ್ರದೇಶ) – ಇಲ್ಲಿಯ ಒಬ್ಬ ಯುವಕನ ಅಮಾನವೀಯವಾಗಿ ಇಲಿಯನ್ನು ಕೊಂದಿರುವುದರಿಂದ ಪೊಲೀಸರು ಅವನನ್ನು ಪೊಲೀಸ ಠಾಣೆಗೆ ಕರೆಯಿಸಿ ೧೦ ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಪಶು ಪ್ರೇಮಿ ಮತ್ತು ಒಂದು ಸಂಸ್ಥೆಯ ಅಧ್ಯಕ್ಷ ಆಗಿರುವ ವಿಕೇಂದ್ರ ಸಿಂಹ ಇವರು ದೂರು ನೀಡಿದ ನಂತರ ಈ ವಿಚಾರಣೆ ನಡೆಸಲಾಗಿದೆ. ವಿಕೇಂದ್ರ ಸಿಂಹ ಇವರು, ಮನೋಜ ಎಂಬ ಯುವಕನು ಒಂದು ಇಲಿಯ ಬಾಲಕ್ಕೆ ಕಲ್ಲುಕಟ್ಟೆ ಅದನ್ನು ಕಾಲುವೆಗೆ ಎಸೆದನು. ನಂತರ ಅದನ್ನು ಹಗ್ಗದ ಸಹಾಯದಿಂದ ಹೊರಗೆ ತೆಗೆದನು ಮತ್ತು ಮತ್ತೆ ಕಾಲುವೆಗೆ ಎಸೆದನು. ಇಲಿ ಸಾಯುವವರೆಗೆ ಅವನು ಹಾಗೆ ಮಾಡುತ್ತಿದ್ದನು. ಆದ್ದರಿಂದ ಅವನ ವಿರುದ್ಧ ಪಶು ಕ್ರೂರತೆಯ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಹಾಗೂ ಇಲಿಯ ಶವ ಪರೀಕ್ಷೆ ಮಾಡಬೇಕೆಂದು, ದೂರಿನಲ್ಲಿ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಲಿಯನ್ನು ಅಮಾನವೀಯ ರೀತಿಯಲ್ಲಿ ಕೊಂದಿರುವುದರಿಂದ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಿರುವ ಪಶು ಪ್ರೇಮಿಗಳು ಗೋವುಗಳನ್ನು ಅಮಾನವೀಯವಾಗಿ ಕೊಲ್ಲುವ ಮತಾಂಧರ ವಿರುದ್ಧ ಎಂದಾದರೂ ದೂರು ನೀಡುವುದಿಲ್ಲ, ಇದನ್ನು ತಿಳಿದುಕೊಳ್ಳಿ ?