ಭಾರತದ ಸ್ವೀಕಾರಾರ್ಹತೆಯ ಸಂಸ್ಕೃತಿಯಿಂದಲೇ ಅಹಿಂದೂಗಳಿಗೆ `ಹಿಂದೂ’ ಎಂದು ಗುರುತು ಸಿಕ್ಕಿತು !

ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರ ಪ್ರತಿಪಾದನೆ

ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ದರ್ಭಾಂಗ (ಬಿಹಾರ) – ಭಾರತದಲ್ಲಿ ವಾಸಿಸುತ್ತಿರುವ ಎಲ್ಲ ನಾಗರಿಕರು ಮೂಲತಃ ಹಿಂದೂಗಳಾಗಿದ್ದಾರೆ. ಭಾರತದಲ್ಲಿ ವಾಸಿಸುತ್ತಿರುವುದರಿಂದಲೇ ಅವರು ಹಿಂದೂಗಳಾಗಿದ್ದಾರೆ. ಅವರ (ಅಹಿಂದೂಗಳು) ಇಂದಿನ ಗುರುತು ಏನೇ ಆಗಿದ್ದರೂ, ಭಾರತದ ಸ್ವೀಕಾರಾರ್ಹತೆಯ ಸಂಸ್ಕೃತಿಯಿಂದಲೇ ಅದು ಅವರಿಗೆ ಸಿಕ್ಕಿದೆ ಎನ್ನುವುದನ್ನು ಅವರು ಸಾರ್ಥಕ ಎಂದು ತಿಳಿಯಬೇಕು. ಶತಕಗಳಿಂದಲೂ ಹಿಂದಿನ ಸಂಸ್ಕೃತಿಯ ಹೆಸರೇ ಹಿಂದುತ್ವವಾಗಿದೆ ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಇಲ್ಲಿ ಸಂಘದ ಸ್ವಯಂ ಸೇವಕರಿಗೆ ಮಾರ್ಗದರ್ಶನ ಮಾಡುವಾಗ ಹೇಳಿದರು.

ಪ.ಪೂ. ಭಾಗವತರು 4 ದಿನಗಳ ಬಿಹಾರ ಪ್ರವಾಸವನ್ನು ಮುಕ್ತಾಯಗೊಳಿಸುವ ಮೊದಲು ನಡೆದ ಈ ಕಾರ್ಯಕ್ರಮದಲ್ಲಿ ಮಾತನ್ನು ಮುಂದುವರಿಸುತ್ತಾ,

೧. ಭಾರತಮಾತೆಯ ಸ್ತುತಿಯನ್ನು ಮಾಡಲು ಸಂಸ್ಕೃತ ಶ್ಲೋಕದ ಪಠಣ ಮಾಡುವುದು ಒಪ್ಪಿಗೆಯಿದ್ದಲ್ಲಿ ಮತ್ತು ಈ ಭೂಮಿಯ ಸಂಸ್ಕೃತಿಯ ರಕ್ಷಣೆ ಮಾಡಲು ಕಟಿಬದ್ಧರಾಗಿರುವ ಪ್ರತಿಯೊಬ್ಬನೂ ಹಿಂದುವೇ ಆಗಿದ್ದಾನೆ.

೨. ಹಿಂದೂ ಸಂಸ್ಕೃತಿಯು ಮೂಲದಲ್ಲಿಯೇ ತನ್ನಲ್ಲಿ ಸೇರಿಸಿ ಕೊಳ್ಳುವಂತಹದ್ದಾಗಿದೆ. ಆದ್ದರಿಂದ ಇಂದು ವಿವಿಧ ಗುರುತುಗಳನ್ನು ಹೇಳುವ ಮತ್ತು ಒಬ್ಬರಿಗೊಬ್ಬರ ವಿರುದ್ಧ ಎದ್ದು ನಿಂತಿರುವ ಜನರು ಕಂಡು ಬರುತ್ತಿದ್ದರೂ, ಪ್ರತಿಯೊಬ್ಬರೂ ಪ್ರಾರಂಭವನ್ನು ಹಿಂತಿರುಗಿ ನೋಡಿದರೆ ಒಂದೇ ಮೂಲ ಕಂಡು ಬರುತ್ತದೆ.

೩. ತಮ್ಮನ್ನು ಇತರರಲ್ಲಿ ನೋಡಿದರೆ, ಸ್ತ್ರೀಯರನ್ನು ಉಪಭೋಗದ ವಸ್ತುವೆಂದು ಅಲ್ಲ, ಮಾತೆಯೆಂದು ನೋಡಬೇಕು ಮತ್ತು ಇತರರ ಮಾಲೀಕತ್ವದ ಆಸ್ತಿಗೆ ಆಸೆ ಪಡದೇ ಇರುವುದು ಇವುಗಳ ಮೌಲ್ಯ ಹಿಂದೂ ಧರ್ಮದ ವ್ಯಾಖ್ಯಾನವನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದರು.