ಫರಾಜನು ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಪರಾರಿಯಾಗುವ ಆರೋಪ !

ಈಗ ಪೂರ್ಣಿಯ (ಬಿಹಾರ) ದಲ್ಲಿ `ಲವ್ ಜಿಹಾದ್’ ನ ಪ್ರಕರಣ

ಪೂರ್ಣಿಯ (ಬಿಹಾರ) – ಇಲ್ಲಿಯ ಬನಮನಖಿ ಇಲ್ಲಿ ಲವ್ ಜಿಹಾದನ ಪ್ರಕರಣ ಬೆಳಕಿಗೆ ಬಂದಿದೆ. ನವಂಬರ್ ೨೪ ರಂದು ಫರಾಜ್ ಎಂಬ ೨೨ ವರ್ಷದ ಮತಾಂಧ ಮುಸಲ್ಮಾನನು ಓರ್ವ ೧೯ ವರ್ಷದ ಹಿಂದೂ ಹುಡುಗಿಯನ್ನು ಕರೆದುಕೊಂಡು ಪಲಾಯನ ಮಾಡಿರುವ ಆರೋಪ ಮಾಡಲಾಗುತ್ತಿದೆ. ಬಿಹಾರ್ ಪೊಲೀಸರು ಫರಾಜನನ್ನು ಬಂಧಿಸುತ್ತಿಲ್ಲ ಎಂಬ ಆರೋಪ ಮಾಡುತ್ತಾ ಲವ್ ಜಿಹಾದ್ ಗೆ ಬೆಂಬಲ ನೀಡಲಾಗುತ್ತಿದೆ ಎಂದು ಸ್ಥಳೀಯ ಜನರ ಅಭಿಪ್ರಾಯವಾಗಿದೆ. ಇನ್ನೊಂದು ಕಡೆ ಪರಾಜ ಕುಟುಂಬದವರು ಅವರಿಬ್ಬರೂ ಅವರ ಇಚ್ಛೆಯಿಂದ ಪಲಾಯನ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಇಂತಹ ಸಮಯದಲ್ಲಿ ಫರಾಜ್ ಮತ್ತು ಸಂತ್ರಸ್ತೆ ಹಿಂದೂ ಹುಡುಗಿಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬೆಳಕಿಗೆ ಬಂದಿದೆ. ಇದರಲ್ಲಿ ಫರಾಜ, ಹುಡುಗಿಯ ತಂದೆ ಸ್ಥಳಿಯ ಮುಖಂಡರ ಸಹಾಯದಿಂದ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾನೆ ಹಾಗೂ ಹುಡುಗಿ ನನ್ನ ತಂದೆ ನನ್ನ ಮನಸ್ಸಿನ ವಿರುದ್ಧ ಬೇರೆಯವರಿಗೆ ಕೊಟ್ಟು ಮದುವೆ ಮಾಡಲು ಇಚ್ಚಿಸುತ್ತಿದ್ದಾರೆ. ನಾವಿಬ್ಬರೂ ಕಳೆದ ೪ ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ ಎಂದು ಹೇಳಿದಳು.

ಸಂಪಾದಕೀಯ ನಿಲುವು

ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅವರನ್ನು ವಶೀಕರಣ ಮಾಡಿರುವ ಅನುಭವ ಇದೆ, ಆದ್ದರಿಂದ ಈ ಪ್ರಕರಣದಲ್ಲಿ ಕೂಡ ಈ ಷಡ್ಯಂತ್ರ ಯಶಸ್ವಿಗೊಳಿಸುವುದಕ್ಕಾಗಿ ಹಾಗೆ ಮಾಡಿಲ್ಲ ಎಂದು ಹೇಗೆ ಹೇಳಲು ಸಾಧ್ಯ ?