ನವದೆಹಲಿ – ಜಗತ್ತಿನಲ್ಲಿರುವ ಬಹಳಷ್ಟು ದೇಶಗಳಲ್ಲಿ ಇಸ್ಲಾಮಿನ ಪ್ರಾಬಲ್ಯವಿದೆ. ಅತ್ಯಂತ ಹೆಚ್ಚಿನ ಮುಸಲ್ಮಾನ ಜನಸಂಖ್ಯೆಯಿರುವ ದೇಶಗಳಲ್ಲಿ ಇಂಡೋನೇಶಿಯಾದ ನಂತರ (೨೩ ಕೋಟಿ ೧೦ ಲಕ್ಷ) ಪಾಕಿಸ್ತಾನ (೨೧ ಕೋಟಿಗಿಂತಲೂ ಹೆಚ್ಚು) ಹಾಗೂ ಭಾರತ (೨೦ ಕೋಟಿಗಿಂತಲೂ ಹೆಚ್ಚು)ದ ಕ್ರಮಾಂಕವಿದೆ. ಭಾರತವು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸ್ವೀಕರಿಸಿದ್ದರೂ, ಇಂಡೋನೇಶಿಯಾ, ಅಫಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಮಾಲಡೀವ ಇವು ಇಸ್ಲಾಮಿ ದೇಶಗಳಾಗಿವೆ. ಇನ್ನೊಂದೆಡೆಯಲ್ಲಿ ಕ್ರೈಸ್ತ ಧರ್ಮದ ಮೂಲವಾಗಿರುವ ವ್ಯಾಟಿಕನ್ ಸಿಟಿಯಲ್ಲಿ ಒಬ್ಬ ಮುಸಲ್ಮಾನನೂ ವಾಸಿಸುವುದಿಲ್ಲ. ಈ ದೇಶದ ಜನಸಂಖ್ಯೆಯು ಸುಮಾರು ೮೦೦ರ ಹತ್ತಿರವಿದೆ. ‘ವರ್ಲ್ಡ ಪಾಪ್ಯುಲೇಶನ ರಿವ್ಯೂ’ ಎಂಬ ವರದಿಯ ಅನುಸಾರ ವ್ಯಾಟಿನನ ಹೊರತು ಜಗತ್ತಿನಲ್ಲಿ ೪೭ ದೇಶಗಳಲ್ಲಿ ಒಬ್ಬ ಮುಸಲ್ಮಾನನೂ ವಾಸಿಸುವುದಿಲ್ಲ. ಈ ದೇಶಗಳಲ್ಲಿ ಟೊಕೆಲಾವು, ನಿಯೂ, ಫಾಕಲ್ಯಾಂಡ ಬೆಟ, ಕುಕ ಆಯಲ್ಯಾಂಡ, ಗ್ರೀನಲ್ಯಾಂಡ, ಸೊಲೋಮನ ಆಯಲ್ಯಾಂಡ, ಮೊನಾಕೊಗಳಂತಹ ಅನೇಕ ದೇಶಗಳಿವೆ.
ಮುಸಲ್ಮಾನ ಜನಸಂಖ್ಯೆಯು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಎಲ್ಲಿದೆ ?
‘‘ವರ್ಲ್ಡ ಪಾಪ್ಯುಲೇಶನ ರಿವ್ಯೂ’ನ ಸಂಕೇತಸ್ಥಳದ ಅನುಸಾರ, ಆಫ್ರಿಕಾದಲ್ಲಿ ‘ಇಸ್ಲಾಮಿಕ ರಿಪಬ್ಲಿಕ ಆಫ್ ಮಾರಿಟಾನಿಯಾ’ ಎಂಬ ಹೆಸರಿನ ಒಂದು ದೇಶವಿದೆ. ಇಲ್ಲಿ ಮುಸಲ್ಮಾನರ ಜನಸಂಖ್ಯೆಯು ಶೇ. ೯೯.೯ರಷ್ಟಿದೆ. ಇದರ ಬಳಿ ಇರುವ ಸೊಮಾಲಿಯಾ (ಶೇ. ೯೯.೮ ರಷ್ಟು), ಟ್ಯುನಿಶಿಯಾ (ಶೇ. ೯೯.೮ ರಷ್ಟು), ಅಫಘಾನಿಸ್ತಾನ (ಶೇ. ೯೯.೭ ರಷ್ಟು), ಅಲ್ಜೇರಿಯಾ (ಶೇ. ೯೯.೭ ರಷ್ಟು), ಇರಾನ (ಶೇ. ೯೯.೪ ರಷ್ಟು), ಯೆಮನ (ಶೇ. ೯೯.೨ ರಷ್ಟು), ಮೊರೊಕ್ಕೊ (ಶೇ. ೯೯ ರಷ್ಟು) ಮತ್ತು ನಾಯಗರ (ಶೇ. ೯೮.೩ ರಷ್ಟು) ಇವು ಮುಸಲ್ಮಾನರು ಹೆಚ್ಚಿನ ಪ್ರಮಾಣದಲ್ಲಿರುವ ದೇಶಗಳಾಗಿವೆ. ಈ ಸೂಚಿಯಲ್ಲಿ ಪಾಕಿಸ್ತಾನದ ಸ್ಥಾನವು ೨೩ನೇಯದ್ದಾಗಿದ್ದು ಅಲ್ಲಿ ಮುಸಲ್ಮಾನರು ಶೇ. ೯೬.೫ರಷ್ಟು ಇದ್ದಾರೆ.
ಯಾವ ದೇಶಗಳಲ್ಲಿ ಒಂದೇ ಒಂದು ಮಸೀದಿಯೂ ಇಲ್ಲ ?
೧. ಸ್ಲೊವ್ಯಾಕಿಯಾ: ಯುರೋಪಿನಲ್ಲಿರುವ ಸ್ಲೊವೇಕಿಯಾ ದೇಶದಲ್ಲಿ ಸುಮಾರು ೫ ಸಾವಿರ ಮುಸಲ್ಮಾನರಿದ್ದಾರೆ. ಈ ದೇಶವು ಕೆಲವು ವರ್ಷಗಳ ಹಿಂದೆ ಚೆಕೊಸ್ಲೊವ್ಯಾಕಿಯಾದಿಂದ ಬೇರ್ಪಟ್ಟಿದೆ. ಇಲ್ಲಿ ಮಸೀದಿ ಕಟ್ಟುವ ಸಂದರ್ಭದಲ್ಲಿ ಅನೇಕ ವಾದಗಳಾದವು. ೨೦೦೦ರಲ್ಲಿ ಸ್ಲೊವ್ಯಾಕಿಯಾದ ರಾಜಧಾನಿಯಲ್ಲಿ ಇಸ್ಲಾಮೀ ಕೇಂದ್ರ ಸ್ಥಾಪನೆಯ ಮೇಲೆ ವಾದ ನಿರ್ಮಾಣವಾಗಿತ್ತು. ಸ್ಲೊವ್ಯಾಕಿಯಾದಲ್ಲಿ ಇಸ್ಲಾಮಿಗೆ ಅಧಿಕೃತ ಧರ್ಮದ ದರ್ಜೆಯಿಲ್ಲ. ನವೆಂಬರ್ ೩೦, ೨೦೧೬ರಂದು ಸ್ಲೊವ್ಯಾಕಿಯಾವು ಒಂದು ಕಾನೂನನ್ನು ಜ್ಯಾರಿಗೊಳಿಸಿತು. ಅನಂತರ ಅದು ಇಸ್ಲಾಮಿಗೆ ಅಧಿಕೃತ ಧರ್ಮದ ದರ್ಜೆ ನೀಡುವುದನ್ನು ನಿಲ್ಲಿಸಿತು.
೨. ಇಸ್ಟೋನಿಯಾ: ಇಸ್ಟೋನಿಯಾ ಒಂದೇ ಒಂದು ಮಸೀದಿಯೂ ಇರದ ೨ನೇ ದೇಶವಾಗಿದೆ. ಈ ದೇಶದಲ್ಲಿನ ಮುಸಲ್ಮಾನರ ಜನಸಂಖ್ಯೆಯು ಅತ್ಯಂತ ಕಡಿಮೆ ಇದೆ. ಇಲ್ಲಿಯೂ ಮಸೀದಿಗಳಿಲ್ಲ.
ಸಂಪಾದಕೀಯ ನಿಲುವುಈ ದೇಶಗಳ ಸುದೈವವೆಂದರೆ ಇಲ್ಲಿ ಭಾರತದಲ್ಲಿನ ಕಥಿತ ಜಾತ್ಯಾತೀತವಾದಿಗಳು ಇಲ್ಲ. ಇಲ್ಲದಿದ್ದರೆ ಅವರು ಇಲ್ಲಿನ ಸರಕಾರವನ್ನು ‘ಮುಸಲ್ಮಾನ ವಿರೋಧಿ’ ಎಂದು ಹೇಳುತ್ತ ಮುಸಲ್ಮಾನರ ವಸತಿಗಳನ್ನು ನಿರ್ಮಿಸಲು ಆಕಾಶಪಾತಾಳ ಒಂದು ಮಾಡುತ್ತಿದ್ದರು ! |