ಸ್ಪರ್ಧೆಯಲ್ಲಿನ ಪಂದ್ಯಗಳಲ್ಲಿ ನಮಾಜ್ ತಪ್ಪಿಸಬಾರದೆಂದು ಮುಸಲ್ಮಾನರಿಗೆ ಸಲಹೆ !

ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಯಿಂದ ಕೇರಳದಲ್ಲಿ ಮುಸಲ್ಮಾನ ಸಂಘಟನೆಗೆ ಚಿಂತೆ

ಪ್ರತೀಕಾತ್ಮಕ ಛಾಯಾಚಿತ್ರ

ತಿರುವನಂತಪುರ (ಕೇರಳ) – ಕತಾರನಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಯಿಂದ ಕೇರಳದಲ್ಲಿನ ಮುಸಲ್ಮಾನ ಸಂಘಟನೆಗಳು ಆತಂಕಗೊಂಡಿದೆ. `ಆಲ್ ಕೇರಳ ಇಯ್ಯಾತುಲ್ ಖುತ್ಬಾ ಸಮಿತಿ’ ಈ ಇಸ್ಲಾಮಿ ಸಂಘಟನೆಯು ಮುಸಲ್ಮಾನರಿಗೆ `ಫುಟ್ಬಾಲ್ ನ ಪಂದ್ಯ ತಡ ರಾತ್ರಿವರೆಗೂ ನಡೆಯುವುದರಿಂದ ನೀವು ನಮಾಜ ತಪ್ಪಿಸಬಾರದೆಂದು’ ಸಲಹೆ ನೀಡಿದೆ. ಕೇರಳದಲ್ಲಿನ ರಸ್ತೆಯ ಮೇಲೆ ಹಾಗೂ ಗ್ರಾಮದಲ್ಲಿ ಫುಟ್ಬಾಲ್ ಆಟಗಾರರ ದೊಡ್ಡ ಫಲಕಗಳು (ಕಟಾವುಟ್) ಹಾಕಲಾಗಿದೆ. ಇದರಿಂದ ಖುತ್ಬಾ ಸಮಿತಿಯು, `ಇದು ಹಣ ವ್ಯರ್ಥ ಮಾಡುವುದು ಸೂಕ್ತವಲ್ಲ ಕಾರಣ ಯಾರಿಗೆ ಆದಾಯವಿಲ್ಲ ಅವರು ಕೂಡ ಇಂತಹ ಹಣದ ಅಪವ್ಯಯದಲ್ಲಿ ಸಹಭಾಗಿಯಾಗುತ್ತಾರೆ ಇದು ಆಘಾತಕಾರಿ ಆಗಿದೆ’ ಎಂದು ಹೇಳಿದರು. ಶುಕ್ರವಾರ ನವೆಂಬರ್ ೨೫ ರಂದು ಮಸೀದಿಯಲ್ಲಿನ ಪ್ರವಚನದಲ್ಲಿ ಈ ವಿಷಯದ ಬಗ್ಗೆ ಹೇಳಲಾದ ನಂತರ ವಾದ ನಿರ್ಮಾಣವಾಯಿತು.

ಸ್ಪರ್ಧೆ ನೋಡುವುದು ಅಥವಾ ನೋಡಬಾರದು ?, ಇದು ನಾಗರೀಕರ ಅಧಿಕಾರ ? – ಕೇರಳಾದ ಶಿಕ್ಷಣ ಸಚಿವ

ಕೇರಳದ ಶಿಕ್ಷಣ ಸಚಿವರಾದ ವಿ. ಶಿವನಕುಟ್ಟಿ ಇವರು, ಜನರ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಲು ಯಾರಿಗೂ ಅಧಿಕಾರ ಇಲ್ಲ. ಸ್ಪರ್ಧೆ ನೋಡಬೇಕೆ ಅಥವಾ ನೋಡಬಾರದು ?, ಸಂಗೀತ ಕೇಳಬೇಕು ಅಥವಾ ಕೇಳಬಾರದು ?, ಪುಸ್ತಕ ಓದಬೇಕೆ ಅಥವಾ ಓದಬಾರದು ? ಇದು ನಿರ್ಧರಿಸುವ ಅಧಿಕಾರ ಜನರಿಗೆ ಇದೆ. ಅದರ ಮೇಲೆ ನಿಷೇಧ ಹೇರುವ ಅಧಿಕಾರ ಯಾರಿಗೂ ಇಲ್ಲ. ಜನಜಾಗೃತಿ ಮೂಡಿಸುವುದು ಇದು ಖುತ್ಬಾ ಸಮಿತಿಯ ಅಧಿಕಾರ ಇದ್ದರೂ ಸಹ ಅದನ್ನು ಒಪ್ಪಬೇಕು ಅಥವಾ ನಿರಾಕರಿಸುವುದು ಇದು ಕೂಡ ಜನರ ಅಧಿಕಾರವೇ ಆಗಿದೆ. ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಸಲ್ಮಾನರ ಧಾರ್ಮಿಕ ಸಂಘಟನೆ ಧರ್ಮದ ಬಗ್ಗೆ ಎಷ್ಟು ಜಾಗೃತವಾಗಿದ್ದಾರೆ, ಅದು ಇದರಿಂದ ತಿಳಿದು ಬರುತ್ತದೆ ! ಹಿಂದೂಗಳ ಒಂದು ಸಂಘಟನೆಯಾದರು ಹಿಂದೂಗಳಿಗೆ ಈ ರೀತಿ ಧರ್ಮಾಚರಣೆಯ ಬಗ್ಗೆ ಸಲಹೆ ನೀಡುತ್ತದೆಯೇ ಮತ್ತು ನೀಡಿದರು ಅದು ಹಿಂದೂಗಳು ಎಂದಾದರೂ ಸ್ವೀಕರಿಸುವರೇ ?