ದೇಸಿ ಸಿಹಿತಿಂಡಿಗಳು ಮತ್ತು ನಮ್ಕೀನ್‌ಗಳ ಪ್ಯಾಕ್ ಮಾಡಿದ ಉತ್ಪನ್ನಗಳ ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂದು ಲೇಬಲ ಅಂಟಿಸಲಾಗುವುದು !

  • ಹೆಚ್ಚಿನ ಸಕ್ಕರೆ ಮತ್ತು ಉಪ್ಪಿನ ಅಂಶವಿರುವ ಸಿಹಿತಿಂಡಿಗಳು ಮತ್ತು ನಮ್ಕೀನ್‌ಗಳ ಮೇಲೆ ಲೇಬಲ ಹಚ್ಚಲು ಸೂಚನೆ

  • ಇಂದೂರದಲ್ಲಿನ (ಮಧ್ಯಪ್ರದೇಶ) ವ್ಯಾಪಾರಿಗಳಿಂದ ವಿರೋಧ

ನವ ದೆಹಲಿ – ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (‘ಎಫ್‌.ಎಸ್‌.ಎಸ್.ಎ.ಐ.’) ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಿಗಾಗಿ ನಿಯಮಗಳನ್ನು ರೂಪಿಸಿದೆ. ಇದರ ಮೂಲಕ, ಸಕ್ಕರೆ ಮತ್ತು ಉಪ್ಪಿನ ಪ್ರಮಾಣವು ಅಧಿಕವಾಗಿದ್ದರೆ, ಅಂತಹ ಆಹಾರ ಪದಾರ್ಥಗಳನ್ನು ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಲಿದೆ. ಪ್ಯಾಕ್ ಮಾಡಲಾಗಿರುವ ಪದಾರ್ಥಗಳ ಮೇಲೆ ಇಂತಹ ಲೇಬಲ್‌ಗಳನ್ನು ಅಂಟಿಸಲಾಗುವುದು. ಅವುಗಳ ಮೇಲೆ ಹಸಿರು ಮತ್ತು ನೀಲಿ ಬಣ್ಣದ ವರ್ತುಲಾಕಾರ ಚಿಹ್ನೆಯನ್ನು ಹಚ್ಚಲಾಗುವುದು. ಇದರಿಂದ ಮಧ್ಯಪ್ರದೇಶದಲ್ಲಿನ ಇಂದೂರ ವ್ಯಾಪಾರಿಗಳು ಇದನ್ನು ವಿರೋಧಿಸತೊಡಗಿದ್ದಾರೆ. ಮಧ್ಯಪ್ರದೇಶದ ಸಿಹಿತಿಂಡಿ ಮತ್ತು ನಮ್ಕೀನ್ ವ್ಯಾಪಾರಿಗಳು ಈ ಕುರಿತು ಪ್ರಾಧಿಕಾರಕ್ಕೆ ಪತ್ರ ಬರೆಯುವ ಮೂಲಕ ಇದನ್ನು ವಿರೋಧಿಸಿದ್ದಾರೆ. ಇದು ದೇಶದ ದೇಸಿ ಸಿಹಿತಿಂಡಿಗಳು ಮತ್ತು ನಮ್ಕೀನ್ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ನಮ್ಕೀನ್ ನ ಉದ್ಯಮ 700 ಕೋಟಿ ರೂಪಾಯಿಗೂ ಹೆಚ್ಚು ಹಾಗೂ ಸಿಹಿ ತಿಂಡಿಗಳ ಉದ್ಯಮ 500 ಕೋಟಿ ರೂಪಾಯಿಗಳಿಗೂ ಹೆಚ್ಚು ಇದೆ.

೧. ಭಾರತದಲ್ಲಿ ಯಾರೂ ಸಿಹಿ ತಿಂದು ತಿಂದು ಹೊಟ್ಟೆ ತುಂಬಿಸಿಕೊಳ್ಳುವುದಿಲ್ಲ ಎಂಬುದು ಸಿಹಿತಿಂಡಿ ಮತ್ತು ನಮ್ಕೀನ್ ಉದ್ಯಮಿಗಳ ಹೇಳಿಕೆಯಾಗಿದೆ. ಹೀಗಾಗಿ ಪೆಟ್ಟಿಗೆಯ ಮೇಲೆ ಇಂತಹ ಎಚ್ಚರಿಕೆಯನ್ನು ಬರೆಯುವುದು ಸರಿಯಲ್ಲ. ಇಂತಹ ನಿಯಮಗಳು ಸಣ್ಣ ವ್ಯಾಪಾರಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವವು ಮತ್ತು ದೊಡ್ಡ ವ್ಯಾಪಾರಿಗಳಿಗೆ ಲಾಭವಾಗುವುದು. ದೊಡ್ಡ ಸಂಸ್ಥೆಗಳ ಒತ್ತಡಕ್ಕೆ ಮಣಿದು ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸ್ಥಳೀಯ ವ್ಯಾಪಾರಿಗಳು ಈ ಉದ್ಯಮದಿಂದ ಹೊರ ಹೋಗಬೇಕೆಂಬುದು ವಿದೇಶಿ ಸಂಸ್ಥೆಗಳ ಇಚ್ಛೆಯಾಗಿದೆ.

೨. ಮಧ್ಯಪ್ರದೇಶದ ಸಿಹಿತಿಂಡಿ ತಯಾರಕರ ಸಂಘದ ಕಾರ್ಯದರ್ಶಿ ಅನುರಾಗ ಬೋಥರಾ ಇವರು ಮಾತನಾಡಿ, ವಿದೇಶಿ ನಿಯಮಗಳನ್ನು ನಕಲು ಮಾಡಿ ಭಾರತದಲ್ಲಿ ನಿಯಮಗಳನ್ನು ರೂಪಿಸಲಾಗುತ್ತಿದೆ. ವಿದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಆಹಾರ ಸಂಸ್ಕೃತಿ ವಿಭಿನ್ನವಾಗಿದೆ. ಭಾರತದಲ್ಲಿ ಸಿಹಿತಿಂಡಿಗಳು, ಉಪ್ಪಿನಕಾಯಿ, ನಮ್ಕೀನ್ ಅನ್ನು ತಿನ್ನಲಾಗುತ್ತದೆ. ಇವುಗಳಲ್ಲಿ ಉಪ್ಪು ಮತ್ತು ಸಕ್ಕರೆ ಹೆಚ್ಚು ಪ್ರಮಾಣದಲ್ಲಿ ಇದ್ದೇ ಇರುತ್ತದೆ. ಆದ್ದರಿಂದಲೇ ಯಾರೂ ಇವುಗಳನ್ನು ಹೊಟ್ಟೆ ತುಂಬ ತಿನ್ನುವುದಿಲ್ಲ. ಆದ್ದರಿಂದ ಇದಕ್ಕೆ ಯಾವುದೇ ಎಚ್ಚರಿಕೆ ನೀಡುವ ಅಗತ್ಯವಿಲ್ಲ. ಎಂದು ಹೇಳಿದರು.