ಸ್ಯಾನಿಟರಿ ನ್ಯಾಪ್ಕಿನ್ ಗಳ ಬಳಕೆಯಿಂದ ಮಹಿಳೆಯರಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಸಾಧ್ಯತೆ !

ಭಾರತದಲ್ಲಿ ಮಾರಾಟವಾಗುವ ಸ್ಯಾನಿಟರಿ ನ್ಯಾಪ್ಕಿನ್‌ಗಳಲ್ಲಿ ರಾಸಾಯನಿಕಗಳ ಹೆಚ್ಚು ಬಳಕೆ !

ನವದೆಹಲಿ – ಭಾರತದಲ್ಲಿ ಮಾರಾಟವಾಗುವ ‘ಸ್ಯಾನಿಟರಿ ನ್ಯಾಪ್ಕಿನ್’ಗಳಲ್ಲಿ ಹೆಚ್ಚು ರಾಸಾಯನಿಕಗಳನ್ನು ಬಳಸಲಾಗುತ್ತಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ನ್ಯಾಪ್ಕಿನ್ ಗಳನ್ನು ಹೆಚ್ಚು ಬಳಸುವುದರಿಂದ ಮಹಿಳೆಯರಿಗೆ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂಬ ಆಘಾತಕಾರಿ ಮಾಹಿತಿಯು ‘ಟಾಕ್ಸಿಕ್ ಲಿಂಕ್’ ಎಂಬ ಸ್ವಯಂಸೇವಿ ಸಂಸ್ಥೆ (ಎನ್.ಜಿ.ಒ.) ನಡೆಸಿದ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

‘ಟಾಕ್ಸಿಕ್ ಲಿಂಕ್’ನ ಪದಾಧಿಕಾರಿ ಆಕಾಂಕ್ಷಾ ಮೆಹರೋತ್ರಾ ಇವರು ಈ ಕುರಿತು, ಈ ನ್ಯಾಪ್ಕಿನಗಳು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಇವುಗಳಲ್ಲಿ ‘ಕಾರ್ಸಿನೋಜೆನ್ಸ್’ (ಕ್ಯಾನ್ಸರ್ ಅನ್ನು ಉತ್ತೇಜಿಸುವ ರಾಸಾಯನಿಕಗಳು), ‘ರಿಪ್ರೊಡಕ್ಟಇವ್ ಟ್ಯಾಕ್ಸಿನ್’ (ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ವಸ್ತುಗಳು), ‘ಎಂಡೋಕ್ರೈನ್ ಡಿಸ್ರಪ್ಟರ್ಸ್’ (ಹಾರ್ಮೋನುಗಳ ಮೇಲೆ ಪರಿಣಾಮ ಬೀರುವ ರಾಸಾಯನಿಕಗಳು) ಮತ್ತು ‘ಅಲರ್ಜಿನ್ಸ್’ (ದೇಹದ ಮೇಲೆ ದುಶ್ಪರಿಣಾಮ ಬೀರುವ ರಾಸಾಯನಿಕಗಳು) ಕಂಡುಬಂದಿವೆ. ಆದ್ದರಿಂದ, ಮಹಿಳೆಯ ಯೋನಿಯ ಮೇಲೆ ರಾಸಾಯನಿಕಗಳ ಗಂಭೀರ ಪರಿಣಾಮವಾಗುವ ಸಾಧ್ಯತೆಯಿದೆ.

ಸಂಪಾದಕೀಯ ನಿಲುವು

ಕೇಂದ್ರ ಸರಕಾರವು ಭಾರತದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ತಯಾರಿಸುವ ಎಲ್ಲಾ ಸಂಸ್ಥೆಗಳನ್ನು ಕೂಲಂಕಷವಾಗಿ ತನಿಖೆ ಮಾಡಬೇಕು ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು, ಜೊತೆಗೆ ಅವರ ಉತ್ಪನ್ನಗಳನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಸ್ಥಾಪಿಸಬೇಕು !