ಜಗತ್ತಿನ ೩ ಮಹಿಳೆಯರಲ್ಲಿ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ! – ತಸ್ಲೀಮ ನಸ್ರೀನ್

ನವ ದೆಹಲಿ – ಅಂತರಾಷ್ಟ್ರೀಯ ಮಟ್ಟದಲ್ಲಿ ೩ ಮಹಿಳೆಯರಲ್ಲಿ ಒಬ್ಬ ಮಹಿಳೆಗೆ ಜೀವನದಲ್ಲಿ ಒಮ್ಮೆಯಾದರೂ ಶಾರೀರಿಕ ಅಥವಾ ಲೈಂಗಿಕ ದೌರ್ಜನ್ಯ ಎದುರಿಸಬೇಕಾಗುತ್ತದೆ. ಇದರ ಹಿಂದೆ ಹೆಚ್ಚಿನ ಸಮಯದಲ್ಲಿ ಆಕೆಯ ಪತಿ ಅಥವಾ ಪ್ರಯತಮ ಇರುತ್ತಾರೆ. ಯಾವ ವ್ಯಕ್ತಿಯ ಬಗ್ಗೆ ಮಹಿಳೆಗೆ ಎಲ್ಲಕ್ಕಿಂತ ಸುರಕ್ಷಿತ ಮತ್ತು ವಿಶ್ವಾಸದ ಎಂದು ತಿಳಿದಿರುತ್ತಾಳೆ, ಅದೇ ಮನೆಯಲ್ಲಿ ಮಹಿಳೆಗೆ ದ್ವೇಷ, ತೊಂದರೆ, ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ ಇಂತಹ ದೌರ್ಜನ್ಯಗಳು ಎದುರಿಸಬೇಕಾಗುತ್ತದೆ ಎಂದು ಮೂಲತಃ ಬಾಂಗ್ಲಾದೇಶದ ಪ್ರಸಿದ್ದ ಲೇಖಕಿ ತಸ್ಲೀಮ ನಸ್ರೀನ್ ಇವರು ಹೇಳಿಕೆ ನೀಡಿದರು. ಆಫ್ಟಾಬ್ ಪುನಾವಾಲಾ ಇವನು ಶ್ರದ್ಧಾ ವಾಲಕರ್ ಇವಳ ಶರೀರದ ೩೫ ತುಂಡುಗಳಾಗಿ ಮಾಡಿರುವ ಘಟನೆಯ ಬಗ್ಗೆ ನಸ್ರೀನ್ ಇವರು ಒಂದು ಲೇಖನ ಬರೆದಿದ್ದಾರೆ. ಅದರಲ್ಲಿ ಅವರು ಮೇಲಿನ ವಿಷಯ ಹೇಳಿದ್ದಾರೆ.

ಈ ಲೇಖನದಲ್ಲಿ ಅವರು, ವಿಶ್ವಸಂಸ್ಥೆಯ ಒಂದು ವರದಿಯ ಪ್ರಕಾರ ೨೦೨೦ ರಲ್ಲಿ ಜಗತ್ತಿನಾದ್ಯಂತ ೮೧ ಸಾವಿರ ಮಹಿಳೆಯರ ಹತ್ಯೆ ಮಾಡಲಾಯಿತು. ಅದರಲ್ಲಿ ೪೭ ಸಾವಿರ ಮಹಿಳೆಯರನ್ನು ಅವರ ಕುಟುಂಬದವರು ಅಥವಾ ಪತಿ ಅಥವಾ ಪ್ರಿಯತಮನು ಹತ್ಯೆ ಮಾಡಿದ್ದಾರೆ. ಇದರ ಅರ್ಥ ಪ್ರತಿ ೧೧ ನಿಮಿಷಕ್ಕೆ ಒಬ್ಬ ಮಹಿಳೆಯ ಹತ್ಯೆ ಮಾಡಲಾಗುತ್ತಿದೆ.

ನಸ್ರಿನ್ ಮುಂದೆ ಬರೆಯುತ್ತಾರೆ,

೧. ನಮ್ಮೆಲ್ಲರಿಗೂ ತಿಳಿದೇ ಇದೆ, ಪುರುಷ ಪ್ರಧಾನ ವಿಚಾರಧಾರೆ, ಲೈಂಗಿಕ ಭೇದ ಭಾವ, ಸ್ತ್ರೀ ದ್ವೇಷ ಮತ್ತು ಮಹಿಳೆಯರನ್ನು ಕೀಳಾಗಿ ನೋಡುವ ಮಾನಸಿಕತೆಯಿಂದ ಅವರ ಮೇಲೆ ಅತ್ಯಾಚಾರವಾಗುತ್ತದೆ.

೨. ಎಲ್ಲಿಯವರೆಗೆ ಪುರುಷ ಪ್ರಧಾನ ವಿಚಾರಧಾರೆ ಹೋಗುವುದಿಲ್ಲ, ಸ್ತ್ರೀ ದ್ವೇಷ ನಾಶವಾಗುವುದಿಲ್ಲ ಮತ್ತು ಲೈಂಗಿಕ ಭೇದ ಭಾವ ಇತಿಹಾಸದ ಪುಟ ಸೇರುವುದಿಲ್ಲ ಅಲ್ಲಿಯವರೆಗೆ ಮಹಿಳೆಯರ ಮೇಲೆ ಅತ್ಯಾಚಾರ, ಬಲಾತ್ಕಾರ ಮತ್ತು ಹತ್ಯೆ ಮಾಡುವ ಸರಣಿ ಮುಂದುವರಿಯುತ್ತದೆ.

೩. ಯಾವುದಾದರೂ ಸಮಾಜದ ಒರಟುತನ ತನ್ನಿಂದ ತಾನೇ ನಾಶವಾಗಲು ಸಾಧ್ಯವಿಲ್ಲ, ಅದಕ್ಕಾಗಿ ನಮಗೆ ಪ್ರಯತ್ನ ಮಾಡಬೇಕಾಗುತ್ತದೆ. ಸಮಾಜದಲ್ಲಿ ಸ್ತ್ರೀ ಮತ್ತು ಪುರುಷ ಇವರಿಬ್ಬರಲ್ಲಿ ಕೂಡ ಸಮಾಜಕ್ಕೆ ಸಭ್ಯ ಸಮಾಜ ನಿರ್ಮಾಣದ ಹೊಣೆ ಇರುತ್ತದೆ.