(ನಿಕಾಹ ಹಲಾಲ ಎಂದರೆ ತಲಾಖ ನೀಡಿದ ನಂತರ ಮತ್ತೆ ಅದೇ ಪತಿಯ ಜೊತೆ ವಿವಾಹ ಮಾಡಿಕೊಳ್ಳುವ ಮೊದಲು ಇನ್ನೊಬ್ಬ ವ್ಯಕ್ತಿಯ ಜೊತೆ ಶಾರೀರಿಕ ಸಂಬಂಧ ಇರಿಸುವುದು)
ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ಬಹುಪತ್ನಿತ್ವ ಮತ್ತು ನಿಕಾಹ ಹಲಾಲ ಈ ಪ್ರಕರಣದ ಬಗ್ಗೆ ವಿಚಾರಣೆ ಮಾಡುವುದಕ್ಕಾಗಿ ಸಂವಿಧಾನ ಪೀಠ ಸ್ಥಾಪಿಸಲು ಅನುಮತಿ ನೀಡಿದೆ. ಮುಖ್ಯ ನ್ಯಾಯಾಧೀಶ ಧನಂಜಯ ಚಂದ್ರಚೂಡ ಇವರ ಅಧ್ಯಕ್ಷತೆಯಲ್ಲಿ ಪೀಠವು ಈ ಅನುಮತಿ ನೀಡಿದೆ. ಹಿರಿಯ ನ್ಯಾಯವಾದಿ ಮತ್ತು ಭಾಜಪದ ನಾಯಕ ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಇವರ ಅರ್ಜಿಯ ಕುರಿತು ಈ ನಿರ್ಣಯ ತೆಗೆದುಕೊಳ್ಳಲಾಯಿತು. ಈ ಅರ್ಜಿಯ ಮೂಲಕ ಮುಸಲ್ಮಾನರಲ್ಲಿನ ಬಹುಪತ್ನಿತ್ವ, ನಿಕಾಹ ಹಲಾಲ ಇದನ್ನು ನಿಷೇಧಿಸಲು ಒತ್ತಾಯಿಸಲಾಗಿದೆ.
Supreme Court Agrees To Form Constitution Bench To Hear Cases Challenging Validity Of Polygamy & Nikah Halala In Muslim Personal Law @Sohini_Chow https://t.co/ZB7YGo6JH3
— Live Law (@LiveLawIndia) November 24, 2022