ಮಹಾನಗರ ಪಾಲಿಕೆಯಲ್ಲಿ ನಮ್ಮ ಪಕ್ಷದ ಮಹಾಪೌರರಾದರೆ, ಮೇರಠನ ಹೆಸರು ‘ನಥೂರಾಮ ಗೋಡಸೆ ನಗರ’ ಎಂದು ಮಾಡುವೆವು ! – ಹಿಂದೂ ಮಹಾಸಭೆಯ ಘೋಷಣೆ

ದೇಶಕ್ಕೆ ‘ಹಿಂದೂ ರಾಷ್ಟ್ರ’ ಮಾಡುವುದು ಇದು ಮುಖ್ಯ !

ಮೇರಠ (ಉತ್ತರಪ್ರದೇಶ) – ಅಖಿಲ ಭಾರತ ಹಿಂದೂ ಮಹಾ ಸಭೆಯು ಮೇರಠ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಮೇರಠದಲ್ಲಿ ಒಂದುವೇಳೆ ಹಿಂದೂ ಮಹಾಸಭೆಯದವರು ಮಹಾಪೌರರಾದರೆ, ಮೇರಠನ ಹೆಸರು ‘ನಥೂರಾಮ ಗೋಡಸೆ ನಗರ’ ಎಂದು ಮಾಡಲಾಗುವುದು, ಎಂದು ಸಹ ಹಿಂದೂ ಮಹಾ ಸಭೆಯು ಘೋಷಿಸಿದೆ. ಹಿಂದೂ ಮಹಾಸಭೆಯು ಘೋಷಣಾ ಪತ್ರ ಹೊರಡಿಸಿದ್ದು ಅದರಲ್ಲಿ ದೇಶವನ್ನು ‘ಹಿಂದೂ ರಾಷ್ಟ್ರ’ ಮಾಡುವುದು ಇದು ಮಹತ್ವದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಮೇರಠದಲ್ಲಿ ಮಹಾನಗರ ಪಾಲಿಕೆಯ ಚುನಾವಣೆ ನಡೆಯಲಿದೆ.

ಹಿಂದೂ ಮಹಾಸಭೆಯ ಉಪಾಧ್ಯಕ್ಷ ಪಂಡಿತ ಅಶೋಕ ಶರ್ಮಾ ಇವರು, ‘ನಗರ ಮತ್ತು ಜಿಲ್ಲೆಯಲ್ಲಿನ ವಿವಿಧ ಸ್ಥಳಗಳಿಗೆ ನೀಡಲಾಗಿರುವ ಮುಸಲ್ಮಾನ ಹೆಸರಗಳು ಬದಲಾಯಿಸಿ ಹಿಂದೂ ಮಹಾಪುರುಷರ ಹೆಸರು ನೀಡಲಾಗುವುದು. ಹಿಂದೆ ಭಾಜಪ ತನ್ನನ್ನು ತಾನು ಹಿಂದೂ ಪಕ್ಷ ಎನ್ನುತ್ತಿತ್ತು; ಆದರೆ ಈ ಪಕ್ಷದಲ್ಲಿ ಈಗ ಇತರ ಧರ್ಮೀಯರ ದೃಷ್ಟಿಯಿಂದ ನೋಡುತ್ತಾರೆ. ಅದೇ ರೀತಿ ಶಿವಸೇನೆ ಕೂಡ ಮುಸಲ್ಮಾನರ ಓಲೈಕೆಯ ರಾಜಕಾರಣ ಮಾಡುತ್ತಿದೆ’, ಎಂದು ಅವರು ಆರೋಪಿಸಿದರು.