ಇರಾನಿನ ಸಂಘದಿಂದ ಹಿಜಾಬ್ ವಿರೋಧದ ಬೆಂಬಲಕ್ಕಾಗಿ ಪಂದ್ಯದ ಮೊದಲು ಮೈದಾನದಲ್ಲಿ ರಾಷ್ಟ್ರಗೀತೆ ಹಾಡಲಿಲ್ಲ !

ಫುಟ್ಬಾಲ್ ವಿಶ್ವಕಪ್ ಸ್ಪರ್ಧೆ

(ಹಿಜಾಬ ಎಂದರೆ ಮುಸಲ್ಮಾನ ಮಹಿಳೆಯರು ಕತ್ತು ಮತ್ತು ತಲೆಯನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ವಸ್ತ್ರ)

ದೋಹ (ಕತಾರ್) – ಇಲ್ಲಿ ನವಂಬರ್ ೨೦ ರಿಂದ ಫುಟ್ಬಾಲ್ ವಿಶ್ವಕಪ್ ಸ್ಪರ್ಧೆ ಆರಂಭವಾಗಿದೆ. ಅಲ್ಲಿ ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಮತ್ತು ಇರಾನ್ ಇವರಲ್ಲಿ ನಡೆಯುವ ಪಂದ್ಯದ ಮೊದಲು ಇರಾನಿನ ಆಟಗಾರರು ಅವರ ದೇಶದ ರಾಷ್ಟ್ರಗೀತೆ ಹಾಡಲಿಲ್ಲ. ಮೈದಾನದಲ್ಲಿ ಯಾವಾಗ ಇರಾನಿನ ರಾಷ್ಟ್ರಗೀತೆ ಆರಂಭವಾಯಿತೋ ಆಗ ಇರನಿನ ಆಟಗಾರರು ಶಾಂತವಾಗಿ ನಿಂತಿದ್ದರು. ಅವರು ಇರಾನಿನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಆಂದೋಲನಕ್ಕೆ ಬೆಂಬಲ ನೀಡುವುದಕ್ಕಾಗಿ ಹೀಗೆ ಮಾಡಿರುವುದು ಎಂದು ಹೇಳಿದರು. ಸೆಪ್ಟೆಂಬರ್ ೨೦೨೨ ರಲ್ಲಿ ಇರಾನಿ ಪೋಲಿಸರಿಂದ ೨೨ ವರ್ಷದ ಯುವತಿಯನ್ನು ಹಿಜಾಬ ದರಿಸದೆ ಇರುವ ಆರೋಪದಡಿಯಲ್ಲಿ ಆಕೆಯನ್ನು ಬಂಧಿಸಿದ್ದರು. ಪೊಲೀಸ ಕೊಠಡಿಯಲ್ಲಿರುವಾಗ ಆ ಯುವತಿ ಸಾವನ್ನಪ್ಪಿದಳು. ಈ ಘಟನೆಯ ನಿಷೇಧವೆಂದು ಇರಾನ್ ಸಂಘದಿಂದ ರಾಷ್ಟ್ರಗೀತೆ ಹಾಡಲಾಗಲಿಲ್ಲ.

ಸಂಪಾದಕೀಯ ನಿಲುವು

ಎಲ್ಲಿ ಹಿಜಾಬವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಸುವ ಇರಾನಿನ ಫುಟ್ಬಾಲ್ ಸಂಘ ಹಾಗೂ ಎಲ್ಲಿ ಹಿಜಾಬದ ಬೆಂಬಲಿಸುವ ಭಾರತದಲ್ಲಿನ ತಥಾಕಥಿತ ಜಾತ್ಯತೀತರು !