ದೆಹಲಿಯಲ್ಲಿನ ಆಮ್ ಆದ್ಮಿ ಪಕ್ಷದ ಶಾಸಕನಿಗೆ ಥಳಿತ !

ಪಾಲಿಗೆ ಚುನಾವಣೆಯ ಅಭ್ಯರ್ಥಿಗೆ ಟಿಕೆಟ್ ಮಾರಿರುವುದರಿಂದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿರುವದರ ಬಗ್ಗೆ ಭಾಜಪದ ದಾವೆ

ದೆಹಲಿ – ಇಲ್ಲಿಯ ಆಢಳಿತಾರೂಢ ಆಮ್ ಆದ್ಮಿ- ಪಕ್ಷದ ಶಾಸಕ ಗುಲಾಬ ಸಿಂಹ ಯಾದವ ಇವರಿಗೆ ನವಂಬರ್ ೨೧ ರಂದು ರಾತ್ರಿ ಕೆಲವು ಜನರು ಕಾಲರ್ ಹಿಡಿದು ಎಳೆದಾಡುತ್ತಾ ಥಳಿಸಿದ್ದಾರೆ. ಈ ಘಟನೆಯ ಒಂದು ವಿಡಿಯೋ ಪ್ರಸಾರಗೊಂಡಿದೆ. ಇದರಲ್ಲಿ ಗುಲಾಬಸಿಂಹ ತನ್ನನ್ನು ತಾನು ಕಾಪಾಡಿಕೊಳ್ಳಲು ಓಡುತ್ತಿರುವುದು ಕಾಣುತ್ತಿದೆ ಮತ್ತು ಕೆಲವು ಜನರು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದಾರೆ. ಗುಲಾಬ ಸಿಂಹ ಇವರು ಇಲ್ಲಿಯ ಶ್ಯಾಮ ವಿಹಾರದಲ್ಲಿ ಅವರ ಕಾರ್ಯಕರ್ತರ ಜೊತೆ ಬೈಠಕ್ ನಡೆಸುತ್ತಿದ್ದರು. ಆ ಸಮಯದಲ್ಲಿ ಈ ಘಟನೆ ನಡೆದಿದೆ. ‘ಈ ಘಟನೆ ಯಾವ ಕಾರಣದಿಂದ ನಡೆದಿದೆ’, ಇದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ; ಆದರೆ ಪಾಲಿಗೆ ಚುನಾವಣೆಗಾಗಿ ಅಭ್ಯರ್ಥಿ ಟಿಕೆಟ್ ಮಾರಿರುವ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಅವರನ್ನು ಹೊಡೆದಿರುವುದು ಎಂದು ಭಾಜಪ ದಾವೆ ಮಾಡುತ್ತಿದೆ.

ಈ ಆರೋಪದ ಬಗ್ಗೆ ಗುಲಾಬ ಸಿಂಹ ಇವರು, ಭಾಜಪ ಯಾವುದೇ ಆಧಾರವಿಲ್ಲದೆ ಆರೋಪ ಮಾಡುತ್ತಿದೆ. ನಾನು ಈಗ ಛಾವಲ ಪೊಲೀಸ್ ಠಾಣೆಯಲ್ಲಿದ್ದೇನೆ. ಈ ಪ್ರದೇಶದಲ್ಲಿನ ಭಾಜಪಾದ ನಗರಸೇವಕರು ಮತ್ತು ಭಾಜಪದ ಅಭ್ಯರ್ಥಿ ದಾಳಿ ಮಾಡಿರುವವರಿಗೆ ರಕ್ಷಣೆ ನೀಡುವುದಕ್ಕಾಗಿ ಪೊಲೀಸ ಠಾಣೆಯಲ್ಲಿ ಉಪಸ್ಥಿತ ಇರುವುದು ನಾನು ನೋಡಿದ್ದೇನೆ. ಇದಕ್ಕಿಂತ ದೊಡ್ಡ ಸಾಕ್ಷಿ ಏನು ಇರಬಹುದು ? ಪ್ರಸಾರ ಮಾಧ್ಯಮಗಳು ಇಲ್ಲಿ ಉಪಸ್ಥಿತ ಇವೆ, ಅವರು ಭಾಜಪಗೆ ವಿಚಾರಿಸಬೇಕು, ಎಂದು ಅವರು ಟ್ವೀಟ್ ಮಾಡಿದ್ದಾರೆ.