ತಿಹಾರ್ ಜೈಲಿನಲ್ಲಿ ಬಲಾತ್ಕಾರದ ಆರೋಪಿಯಿಂದ ‘ಆಪ್’ನ ಸಚಿವ ಸತ್ಯೇಂದ್ರ ಜೈನ್ ಇವನ ಮಾಲೀಶ್ ! – ತಿಹಾರ ಜೈಲಿನ ವ್ಯವಸ್ಥಪಕರಿಂದ ಮಾಹಿತಿ

‘ಆಪ್’ ಮಾಲೀಶ್ ಮಾಡುವವನು ಫಿಜಿಯೋಥೆರಪಿಸ್ಟ್ ಆಗಿದ್ದಾರೆ ಎಂದು ದಾವೆ ಮಾಡಿದ್ದರು !

ನವದೆಹಲಿ – ಇಲ್ಲಿಯ ತಿಹಾರ ಜೈಲಿನಲ್ಲಿ ಆರ್ಥಿಕ ಅವ್ಯವಹಾರದ ಆರೋಪದಲ್ಲಿ ಬಂಧಿಸಲಾಗಿರುವ ದೆಹಲಿಯಲ್ಲಿನ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಕಾರಾಗೃಹದಲ್ಲಿ ಮಾಲೀಶ್ ಮಾಡಿಸಿಕೊಳ್ಳುತ್ತಿರುವ ಒಂದು ವಿಡಿಯೋ ಈ ಮೊದಲೇ ಬಹಿರಂಗವಾಗಿತ್ತು. ಆ ಸಮಯದಲ್ಲಿ ‘ಆಪ್’ನಿಂದ ಸ್ಪಷ್ಟೀಕರಣ ನೀಡುತ್ತಾ ‘ಜೈನ್ ಇವರಿಗೆ ಚಿಕಿತ್ಸೆಗಾಗಿ ಫಿಜಿಯೋಥೆರಪಿಸ್ಟ್‌ನಿಂದ ಮಾಲೀಶ್ ಮಾಡಿಸಿಕೊಳ್ಳಲು ಅನುಮತಿ ನೀಡಲಾಗಿದೆ’, ಎಂದು ಹೇಳಿದ್ದರು; ಆದರೆ ಈಗ ಬೆಳಕಿಗೆ ಬಂದಿರುವ ಮಾಹಿತಿಯ ಪ್ರಕಾರ ವಿಡಿಯೋದಲ್ಲಿರುವ ವ್ಯಕ್ತಿ ಜೈನ್ ಇವರ ಮಾಲೀಶ್ ಮಾಡುತ್ತಿರುವವನು, ಆ ವ್ಯಕ್ತಿ ಬಲತ್ಕಾರದ ಪ್ರಕರಣದಲ್ಲಿ ಇದೇ ಕಾರಾಗೃಹದಲ್ಲಿ ಬಂಧಿತನಾಗಿರುವ ಆರೋಪಿಯಾಗಿದ್ದಾನೆ. ಈ ಆರೋಪಿಯ ಹೆಸರು ರಿಂಕು ಆಗಿದೆ. ತಿಹಾರ ಜೈಲಿನ ಅಧಿಕೃತ ಸೂತ್ರಗಳಿಂದ ಈ ಮಾಹಿತಿ ನೀಡಲಾಗಿದೆ.

ಸಂಪಾದಕೀಯ ನಿಲುವು

ಎಲ್ಲಾ ರಾಜಕೀಯ ಪಕ್ಷದವರು ಒಂದೇ ಸರದ ಮಣಿಗಳಾಗಿದ್ದಾರೆ, ಎಂಬುದನ್ನು ತಿಳಿದುಕೊಳ್ಳಿ ! ಆಮ್ ಆದ್ಮಿ ಪಕ್ಷದ ಸ್ಥಾಪನೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಆಗಿತ್ತು ಮತ್ತು ಅದರ ಆಧಾರದಲ್ಲಿ ೨ ರಾಜ್ಯಗಳಲ್ಲಿ ಅದು ಅಧಿಕಾರಕ್ಕೆ ಬಂದಿತು; ಆದರೆ ಭ್ರಷ್ಟಾಚಾರ ನಾಶ ಮಾಡುವ ಬದಲು ಸ್ವತಃ ಭ್ರಷ್ಟಾಚಾರ ಮಾಡುತ್ತಿದೆ, ಇದು ಇದರಿಂದ ಗಮನಕ್ಕೆ ಬರುತ್ತದೆ !