ಒರಿಸ್ಸಾದಲ್ಲಿ ರೈಲು ಹಳಿತಪ್ಪಿ ರೈಲು ನಿಲ್ದಾಣಕ್ಕೆ ನುಗ್ಗಿದ ಸರಕು ರೈಲು, ೩ ಮಂದಿ ಸಾವು

ಭುವನೇಶ್ವರ (ಒರಿಸ್ಸಾ) – ರಾಜ್ಯದ ಜಾಜಪುರ ಜಿಲ್ಲೆಯ ಕೋರೆಯಿ ರೈಲು ನಿಲ್ದಾಣದಲ್ಲಿ ಸರಕು ಸಾಗಣೆ ರೈಲು ಬೆಳಗ್ಗೆ ೭ ಗಂಟೆ ಸುಮಾರಿಗೆ ಹಳಿತಪ್ಪಿ ನಿಲ್ದಾಣದ ನಿರೀಕ್ಷಣಾ ಕೊಠಡಿಯಲ್ಲಿ ನುಗ್ಗಿತು. ಇದರಲ್ಲಿ ೩ ಜನರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತದಿಂದಾಗಿ ಇಲ್ಲಿಯ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.