ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಹಿಂದೆ ಜಿಹಾದಿ ಇಸ್ಲಾಮಿಕ್ ಭಯೋತ್ಪಾದನೆಯ ಕೈವಾಡವಿದೆಯೇ ಎಂದು ತನಿಖೆಯಾಗಬೇಕು !

ಮಂಗಳೂರಿನ ನಾಗೋರಿಯಲ್ಲಿ ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಹಿಂದೆ ಇಸ್ಲಾಮಿಕ್ ಜಿಹಾದಿಗಳ ಕೈವಾಡ ಇರುವುದು ಗಮನಕ್ಕೆ ಬರುತ್ತಿದೆ. ಈ ಪ್ರಕರಣವನ್ನು ಗಮನಿಸಿದಾಗ ಜಿಹಾದಿ ಶಕ್ತಿಗಳು ಸ್ಫೋಟ ಮಾಡಿಸಿ, ಅದನ್ನು ಹಿಂದೂಗಳ ಕೈಗೆ ಕಟ್ಟುವ ಷಡ್ಯಂತ್ರ್ಯ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಈ ಹಿಂದೆ ಮುಂಬಯಿನ ತಾಜ್ ಹೋಟೆಲ್ ಮೇಲೆ ಪಾಕ್ ಮೂಲದ ಇಸ್ಲಾಮಿಕ್ ಭಯೋತ್ಪಾದಕರು ದಾಳಿ ಮಾಡಿದಾಗ, ಅದರಲ್ಲಿನ ಭಯೋತ್ಪಾದಕ ಕಸಬ್ ಕೈಗೆ ಕೆಂಪುದಾರವನ್ನು ಕಟ್ಟಿ, ದಾಳಿಯ ಹಿಂದೆ ಹಿಂದೂಗಳ ಕೈವಾಡ ಇದೆಯೆಂದು ಬಿಂಬಿಸುವ ಪ್ರಯತ್ನ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಹ ಇಂತಹ ಷಡ್ಯಂತ್ರ್ಯವು ಗಮನಕ್ಕೆ ಬರುತ್ತಿದೆ. ದೇಶದಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡುವ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾವನ್ನು ಕೇಂದ್ರ ಸರಕಾರವು ನಿಷೇಧ ಮಾಡಿದಾಗ, ಈ ನಿಷೇಧದ ವಿರುದ್ಧ ಪ್ರತಿಕಾರ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಲಾಗಿದ್ದು, ಅದರ ಮುಂದುವರೆದ ಭಾಗದಂತೆ ಈ ಸ್ಫೋಟ ಸಂಭವಿಸಿರುವುದು ಗಮನಕ್ಕೆ ಬರುತ್ತಿದೆ. ಕಳೆದ ತಿಂಗಳು ದೀಪಾವಳಿಯ ಸಂದರ್ಭದಲ್ಲಿ ಕೊಯಮತ್ತೂರಿದಲ್ಲಿ ಸಹ ಓರ್ವ ಭಯೋತ್ಪಾದಕ ಗ್ಯಾಸ್ ಮೂಲಕ ದೇವಸ್ಥಾನದ ಕಾರ್ಯಕ್ರಮದಲ್ಲಿ ಸ್ಫೋಟ ಮಾಡುವ ಉದ್ದೇಶದಿಂದ ಸಂಚು ರೂಪಿಸಿದ್ದನು. ತದನಂತರ ಅವನೇ ಗ್ಯಾಸ್ ಬಾಂಬ್ ಸ್ಫೋಟಕ್ಕೆ ಬಲಿಯಾದ ಘಟನೆ ನಡೆದಿದೆ. ಹಾಗಾಗಿ ಈ ಎರಡು ಪ್ರಕರಣಗಳಿಗೆ ಸಾಮ್ಯತೆ ಇದೆ. ಈ ಎಲ್ಲ ಘಟನೆಗಳನ್ನು ಗಮನಿಸಿದಾಗ ಜಿಹಾದಿ ಶಕ್ತಿಗಳು ದೇಶದಲ್ಲಿ ಹಿಂದೂಗಳ ವಿರುದ್ಧ ಬಹುದೊಡ್ಡ ಪ್ರಮಾಣದಲ್ಲಿ ಸ್ಫೋಟ ನಡೆಸಿ, ದೇಶವ್ಯಾಪಿ ವಿದ್ವಂಸಕ ಕೃತ್ಯ ಮಾಡಲು ಷಡ್ಯಂತ್ರ್ಯ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಈ ಎಲ್ಲ ಘಟನೆಗಳು ಅತ್ಯಂತ ಗಂಬೀರವಾಗಿವೆ. ದೇಶದಲ್ಲಿ ಹಿಂದೂಗಳ ಸುರಕ್ಷತೆಯ ದೃಷ್ಟಿಯಿಂದ ಇದರ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆಯನ್ನು ಮಾಡಬೇಕು, ಇದರ ಹಿಂದೆ ಯಾರ ಕುಮ್ಮಕ್ಕು ಇದೆ ? ಯಾರು ಹಣಕಾಸು ಸಹಾಯ ಮಾಡುತ್ತಾರೆ ? ಎಂಬ ಎಲ್ಲ ಅಂಶಗಳನ್ನು ಗಂಬೀರವಾಗಿ ತನಿಖೆ ಮಾಡುವುದು ಅಗತ್ಯವಾಗಿದೆ. ಅದಕ್ಕಾಗಿ ಈ ಪ್ರಕರಣವನ್ನು ಭಯೋತ್ಪಾದನಾ ಚಟುವಟಿಕೆಯೆಂದು ಪರಿಗಣಿಸಿ, ಶೀಘ್ರವಾಗಿ ತನಿಖೆಯನ್ನು ಮಾಡಿ, ಭಯೋತ್ಪಾದಕರಿಗೆ ಶಿಕ್ಷೆ ನೀಡಬೇಕೆಂಬ ಆಗ್ರಹವನ್ನು ಹಿಂದೂ ಜನಜಾಗೃತಿ ಸಮಿತಿಯು ಮಾಡುತ್ತದೆ.