ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಘರವಾಪಸಿಯ 22ನೇ ಘಟನೆ !
(ಘರವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಮರುಪ್ರವೇಶ)
ಖಾಂಡ್ವಾ (ಮಧ್ಯಪ್ರದೇಶ) – ಫಿರೋಜ ಎಂಬ ಮುಸ್ಲಿಂ ಯುವಕ ಇತ್ತೀಚೆಗೆ ವಿಧಿವತ್ತಾಗಿ ಹಿಂದೂ ಧರ್ಮಕ್ಕೆ ಮರುಪ್ರವೇಶಿಸಿದ್ದಾರೆ. ಅವರ ಹೆಸರನ್ನು ಬದಲಾಯಿಸಿ ‘ರಾಹುಲ್ ಸನಾತನಿ’ ಎಂದು ನಾಮಕರಣ ಮಾಡಲಾಗಿದೆ. ಇಲ್ಲಿನ ಮಹಾದೇವಗಡ ದೇವಸ್ಥಾನದಲ್ಲಿ ಪಂಡಿತ್ ಅಶ್ವಿನ್ ಖೇಡೆ ಅವರ ಉಪಸ್ಥಿತಿಯಲ್ಲಿ ಹೋಮ-ಹವನ, ಮಂತ್ರೋಚ್ಛಾರಗಳಿಂದ ಶುದ್ಧೀಕರಣ ಪ್ರಕ್ರಿಯೆಯು ಪೂರ್ಣಗೊಂಡಿತು. ಇದು ಕಳೆದ 2 ವರ್ಷಗಳಲ್ಲಿ ಖಾಂಡ್ವಾ ಜಿಲ್ಲೆಯಲ್ಲಿ ನಡೆದ ಘರವಾಪಸಿಯ 22ನೇ ಘಟನೆಯಾಗಿದೆ.
ಖಾಂಡ್ವಾದಲ್ಲಿರುವ ದುಬೆ ಕಾಲೋನಿಯ ನಿವಾಸಿ ಫಿರೋಜ ಮಾತನಾಡಿ, ಅವರಿಗೆ 14 ನೇ ವಯಸ್ಸಿನಿಂದಲೂ ಹಿಂದೂ ಧರ್ಮದಲ್ಲಿ ಅಪಾರ ನಂಬಿಕೆ ಹೊಂದಿದ್ದರು. ಭಜರಂಗಬಲಿ ಮತ್ತು ‘ಖಾತು ಶ್ಯಾಮಜಿ’ (ಭಗವಾನ ಶ್ರೀಕೃಷ್ಣ) ಅವರ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು ಮತ್ತು ಇದೇ ಅವರ ಘರವಾಪಸಿಯ ಮುಖ್ಯ ಕಾರಣವಾಗಿದೆಯೆಂದು ಹೇಳಿದರು. ಶುದ್ಧೀಕರಣವನ್ನು ಅವರು ಮತಾಂತರವೆಂದು ಹೇಳದೇ ತನ್ನ ಸ್ವಂತ ಮೂಲದೆಡೆಗೆ ಮರಳುವಿಕೆ ಎಂದು ವಿವರಿಸಿದ್ದಾರೆ.
ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ಅಶೋಕ ಪಲಿವಾಲ ಮಾತನಾಡಿ, ಫಿರೋಜ ಅವರ ನಿರ್ಣಯದಿಂದ ಅವರಿಗೆ ಅವರ ಕುಟುಂಬ ಮತ್ತು ಸಮಾಜದಿಂದ ವಿರೋಧವನ್ನು ಎದುರಿಸಬೇಕಾಯಿತು. ಇದರಿಂದಾಗಿ ಅವರು ಸ್ವಲ್ಪ ಸಮಯದವರೆಗೆ ಇಂದೋರ್‍ಗೆ ಹೋಗಬೇಕಾಯಿತು’, ಎಂದು ಹೇಳಿದರು. (ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧರ್ಮ ಸ್ವಾತಂತ್ರ್ಯದ ನೆಪದಲ್ಲಿ ಹಿಂದೂ ಧರ್ಮದ ವಿರುದ್ಧ ಕೂಗಾಡುವ ತಥಾಕಥಿತ ಪ್ರಗತಿ(ಅಧೋ)ಪರರು ಇಂತಹ ಸಂದರ್ಭಗಳಲ್ಲಿ ಯಾವ ಬಿಲದಲ್ಲಿ ಹೋಗಿ ಅಡಗಿಕೊಳ್ಳುತ್ತಾರೆ ? – ಸಂಪಾದಕರು)
ರಾಹುಲ್ ಮಾತನಾಡಿ, ಸನಾತನ ಧರ್ಮವು ಎಲ್ಲರ ಕಲ್ಯಾಣದ ಮನೋಭಾವವನ್ನು ಹೊಂದಿದೆ ಮತ್ತು ಅದಕ್ಕಾಗಿಯೇ ಅದನ್ನು ನಾನು ಸ್ವೀಕರಿಸಿದ್ದೇನೆ ಎಂದು ಹೇಳಿದರು. ಸನಾತನ ಧರ್ಮಕ್ಕೆ ಬಂದ ನಂತರ ಅವರಿಗೆ ಆಧ್ಯಾತ್ಮಿಕ ಶಾಂತಿ ಮತ್ತು ಸಮಾಧಾನವೂ ಸಿಗುತ್ತಿದೆಯೆಂದು ಹೇಳಿದರು.