ಕೊಯಮತ್ತೂರಿನಿಂದ (ತಮಿಳುನಾಡು) 31 ಬಾಂಗ್ಲಾದೇಶಿ ನುಸುಳುಕೋರರ ಬಂಧನ !

ಕೊಯಮತ್ತೂರು (ತಮಿಳುನಾಡು) – ರಾಜ್ಯದ ಉಗ್ರ ನಿಗ್ರಹ ದಳ (ಎಟಿಎಸ್) ತಿರುಪ್ಪೂರು ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿ ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ 31 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದೆ. ಈ ನುಸುಳುಕೋರರು ತಿರುಪ್ಪೂರು ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿ ಬಹಳ ದಿನಗಳಿಂದ ವಾಸಿಸುತ್ತಿದ್ದರು. ಈ ಜನರು ಬಂಗಾಳದ ಮೂಲಕ ಭಾರತಕ್ಕೆ ಪ್ರವೇಶಿಸಿ ನಂತರ ತಿರುಪ್ಪೂರು ಮತ್ತು ಕೊಯಮತ್ತೂರು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ದಾಖಲೆಗಳನ್ನು ತಯಾರಿಸಿಕೊಂಡು ವಾಸಿಸುತ್ತಿದ್ದರು, ಎಂದು ತನಿಖೆಯಿಂದ ತಿಳಿದುಬಂದಿದೆ. ಬಂಧಿತ ಈ ನುಸುಳುಕೋರರನ್ನು ಪಲ್ಲದಂ ಮತ್ತು ತಿರುಪ್ಪೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

1. ಅಸ್ಸಾಂ ಮುಖ್ಯಮಂತ್ರಿ ಇತ್ತೀಚೆಗೆ ಅನೇಕ ಬಾಂಗ್ಲಾದೇಶಿ ನುಸುಳುಕೋರರು ಇಲ್ಲಿ ಅಡಗಿಕೊಂಡಿದ್ದಾರೆ ಮತ್ತು ತಮಿಳುನಾಡು ಪೊಲೀಸರು ಅವರ ತನಿಖೆ ಮಾಡಬೇಕು’, ಎಂದು ಹೇಳಿಕೆ ನೀಡಿದ್ದರು. ಇದರ ನಂತರ, ತಮಿಳುನಾಡು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. (ಅಸ್ಸಾಂ ಮುಖ್ಯಮಂತ್ರಿಗಳು ಈ ವಿಷಯವನ್ನು ಅವರ ಗಮನಕ್ಕೆ ತಂದ ನಂತರ, ಪೊಲೀಸರು ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಿದರು; ಹಾಗಾದರೆ ತಮಿಳುನಾಡು ಸರಕಾರ ಏನು ಮಾಡುತ್ತಿದೆ, ಎಂದು ಸಾಮಾನ್ಯ ಪ್ರಜೆಗಳು ಕೇಳಿದರೆ, ಅದರಲ್ಲಿ ಏನು ತಪ್ಪು ? – ಸಂಪಾದಕರು)

2. ಜನವರಿ 11 ರಂದು, ತ್ರಿಪುರಾ ರಾಜ್ಯದ ಖೋವಯಿ ಜಿಲ್ಲೆಯಲ್ಲಿ ಗಡಿ ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ 3 ಬಾಂಗ್ಲಾದೇಶಿ ಪ್ರಜೆಗಳನ್ನು ಭದ್ರತಾ ಪಡೆ ಸೈನಿಕರು ಬಂಧಿಸಿದರು.