ಬೀದಿ ನಾಯಿಗಳನ್ನು ಸಾಕುವಾಗ ಇತರರಿಗೆ ತೊಂದರೆಯಾಗಬಾರದು ! – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಬೀದಿ ನಾಯಿಗಳಿಗೆ ಸಾಕುತ್ತಿದ್ದಾರೆ ಎಂದರೆ ನಿಮಗೆ ಅದನ್ನು ರಸ್ತೆಯ ಮೇಲೆ ತಂದು ಕಚ್ಚಾಡಬೇಕು ಅಥವಾ ಇತರರ ದಿನನಿತ್ಯದ ಜೀವನದಲ್ಲಿ ಅದರ ದುಷ್ಪರಿಣಾಮವಾಗಬೇಕು ಎಂದು ಅದರ ಅರ್ಥವಲ್ಲ, ಎಂದು ಹೇಳುತ್ತಾ ಸರ್ವೋಚ್ಚ ನ್ಯಾಯಾಲಯವು ಬೀದಿ ನಾಯಿಗಳನ್ನು ಸಾಕಲು ನ್ಯಾಯಾಲಯದ ರಕ್ಷಣೆಗಾಗಿ ಕೋರಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದೆ. ಬೀದಿ ನಾಯಿಗಳ ಸಂದರ್ಭದಲ್ಲಿ ಎರಡನೇಯ ಖಂಡಪೀಠವು ವಿಚಾರ ಮಾಡುತ್ತಿರುವುದರಿಂದ ಈ ದೂರಿನ ಮೇಲೆ ವಿಚಾರ ಮಾಡಲು ನ್ಯಾಯಾಲಯವು ನಿರಾಕರಿಸಿದೆ. ‘ಸಂಬಂಧಿಸಿದ ಖಂಡಪೀಠದಲ್ಲಿ ದೂರು ದಾಖಲಿಸಿರಿ’, ಎಂದು ನ್ಯಾಯಮೂರ್ತಿ ಎಂ.ಆರ್. ಶಹಾ ಮತ್ತು ನ್ಯಾಯಮೂರ್ತಿ ಎಂ.ಎಂ. ಸುಂದರೇಶ ಇವರ ಖಂಡಪೀಠವು ಅರ್ಜಿದಾರರ ನ್ಯಾಯವಾದಿಗಳಿಗೆ ತಿಳಿಸಿದ್ದಾರೆ. ಮಧ್ಯಪ್ರದೇಶದ ಸಮರೀನ ಬಾನೊ ಇವರು ಅರ್ಜಿ ದಾಖಲಿಸಿ ‘ರಾಜ್ಯದಲ್ಲಿ ಬೀದಿ ನಾಯಿಗಳಿಗೆ ರಕ್ಷಣೆ ನೀಡಲಾಗುತ್ತಿಲ್ಲ’, ಎಂದು ಅರ್ಜಿ ಸಲ್ಲಿಸಿದ್ದರು, ಹಾಗೆಯೇ ಅವರು ಸಾಕಿದ್ದ ೬೭ ಬೀದಿ ನಾಯಿಗಳಿಗಾಗಿ ರಕ್ಷಣೆಯನ್ನು ಕೋರಿದ್ದರು.

ಸಂಪಾದಕೀಯ ನಿಲುವು

ಮೂಲದಲ್ಲಿ ಬೀದಿ ನಾಯಿಗಳಿಂದ ಎಲ್ಲರಿಗೂ ತೊಂದರೆಯಾಗುತ್ತದೆಯೆನ್ನುವುದು ಸ್ಪಷ್ಟವಾಗಿದೆ. ದೇಶದಲ್ಲಿ ಪ್ರತಿದಿನ ಸಾಕು ನಾಯಿಗಳಿರಲಿ ಅಥವಾ ಬೀದಿ ನಾಯಿಗಳಿರಲಿ, ಅದು ಅನೇಕ ಜನರಿಗೆ ಕಚ್ಚುವುದರಿಂದ ಇದರ ಮೇಲೆ ಶಾಶ್ವತ ಉಪಾಯವನ್ನು ಕಂಡು ಹಿಡಿಯುವ ಆವಶ್ಯಕತೆಯಿದೆ !