ಮೆರಠ (ಉತ್ತರಪ್ರದೇಶ) – ಮುಸಲ್ಮಾನರ ಉಡುಗೆ ತೊಡುಗೆ ನೋಡಿ ಭಯವಾಗುತ್ತದೆ. ದೇಶದಲ್ಲಿ ಮತಾಂತರ ತಡೆಯದ್ದಿದ್ದರೆ , ಪರಿಸ್ಥಿತಿ ಭಯಾನಕವಾಗಲಿದೆ ಎಂದು, ಬದರಿನಾಥದಲ್ಲಿನ ಜ್ಯೋತಿಷ್ಯ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಪೀಠದ ಗದ್ದುಗೆಯ ಮೇಲೆ ವಿರಾಜಮಾನ ವಾದ ನಂತರ ಮೊದಲ ಬಾರಿಗೆ ಮೆರಠಗೆ ಬಂದ್ದಿದ್ದರು. ಈ ಸಮಯದಲ್ಲಿ “ದಿವ್ಯ ಮರಾಠಿ” ವಾರ್ತೆಯ ಜಾಲತಾಣದಲ್ಲಿನ ಪ್ರತಿನಿಧಿಯ ಜೊತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು ಆ ಸಮಯದಲ್ಲಿ ಅವರು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು.
ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಹೇಳಿರುವ ಅಂಶಗಳು
೧. ಮತಾಂತರದಿಂದಾಗಿ ದೇಶದಲ್ಲಿ ಯಾವ ಪರಿಸ್ಥಿತಿ ಉದ್ಭವಿಸಿದೆಯೋ, ಅದು ಎಲ್ಲರ ಎದುರಿಗೆ ಇದೆ. ಇದರ ಬಗ್ಗೆ ಸರಕಾರ ಮತ್ತು ನ್ಯಾಯಾಲಯ ಯೋಚನೆ ಮಾಡುತ್ತಿದೆ, ಇದು ಬಹಳ ಮಹತ್ವದ್ದಾಗಿದೆ. ಸರ್ವೋಚ್ಚ ನ್ಯಾಯಾಲಯ ಸ್ವತಹ ಅದನ್ನು ಗಮನಿಸಿ ಈ ವಿಷಯವಾಗಿ ಸುಧಾರಣೆ ತರುವ ಆದೇಶ ನೀಡಬೇಕು, ಇಲ್ಲವಾದರೆ ದೇಶದ ಪರಿಸ್ಥಿತಿ ಯಾವ ದಿಕ್ಕಿಗೆ ಹೋಗುತ್ತಿದೆ ಇದನ್ನು ತಾವು ನೋಡುತ್ತಿದ್ದೀರಿ. ಇದು ಎಲ್ಲರಿಗೂ ಚಿಂತಾಜನಕ ವಿಷಯವಾಗಿದೆ.
೨. ಮದರಸಾಗಳ ಸಮೀಕ್ಷೆ ಮಾಡಬೇಕಾಗಬಹುದು. ಮದರಸಾಗಳಲ್ಲಿ ನಡೆಯುವ ಘಟನೆ ಪ್ರತಿಯೊಬ್ಬರಿಗೆ ತಿಳಿಯಬೇಕು. ಎಷ್ಟು ಮದರಸಾಗಳಿವೆ ? ಇದರಲ್ಲಿ ಏನು ನಡೆಯುತ್ತಿದೆ ? ಇದೆಲ್ಲವೂ ಸರಕಾರಕ್ಕೆ ತಿಳಿದಿರಬೇಕು.
೩. ಮುಸಲ್ಮಾನರ ಉಡುಗೆ ತೊಡುಗೆಯಿಂದ ಜನರು ಅವರಿಗೆ ಹೆದರುತ್ತಿದ್ದಾರೆ. ಯಾರಾದರೂ ಮುಸಲ್ಮಾನನು ಅವನ ಉಡುಪು ಧರಿಸಿಕೊಂಡು ಬೇರೆ ದೇಶಕ್ಕೆ ಹೋದರೆ ಅವನನ್ನು ಅತಿರಿಕ್ತ ಪರಿಶೀಲನೆ ಮಾಡಲಾಗುತ್ತದೆ. ಏಕೆಂದರೆ ಅವನ ಪ್ರತಿಷ್ಠೆಯ ಮೇಲೆ ಪರಿಣಾಮವಾಗಿದೆ. ಅವನ ಸಮಾಜದಲ್ಲಿನ ಜನರು ಏನನ್ನೋ ಮಾಡಿರುವುದರಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯ ಚಿತ್ರಣ ಮೂಡಿದೆ .