ಹಿಂದೂ ವಿದ್ಯಾರ್ಥಿಗಳು ವಿರೋಧಿಸಿದಾಗ ಥಳಿತ !
ಮೋಗಾ (ಪಂಜಾಬ) – ಟಿ-೨೦ ವರ್ಲ್ಡಕಪ್ ಕ್ರಿಕೆಟ ಸ್ಪರ್ಧೆಯ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಪಾಕಿಸ್ತಾನವನ್ನು ಸೋಲಿಸಿತು. ಈ ಕಾರಣದಿಂದ ಇಲ್ಲಿಯ ಗಲ್ ಕಲಾನ ಗ್ರಾಮದಲ್ಲಿ ಲಾಲಾ ಲಜಪತ ರಾಯ ಇಂಜನಿಯರಿಂಗ ಮತ್ತು ವ್ಯವಸ್ಥಾಪನ ವಿಶ್ವವಿದ್ಯಾಲಯದ ಆವರಣದಲ್ಲಿ ಜಮ್ಮೂ-ಕಾಶ್ಮೀರದ ಮುಸಲ್ಮಾನ ವಿದ್ಯಾರ್ಥಿಗಳ ಗುಂಪು ಮತ್ತು ಬಿಹಾರ ಮತ್ತು ಇತರೆ ರಾಜ್ಯಗಳ ಹಿಂದೂ ವಿದ್ಯಾರ್ಥಿಗಳೊಂದಿಗೆ ಹೊಡೆದಾಟ ನಡೆಯಿತು. ಇದರಲ್ಲಿ ಎರಡೂ ಬದಿಯ ಕೆಲವು ವಿದ್ಯಾರ್ಥಿಗಳು ಗಾಯಗೊಂಡರು. ಈ ವಿದ್ಯಾರ್ಥಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಗಿದೆ.
#Punjab: #College students clash over #EngvsPak T20 world cup final, several injured#T20WorldCupFinal https://t.co/70nY53yGkb
— DNA (@dna) November 13, 2022
ಈ ಪಂದ್ಯದಲ್ಲಿ ಕಾಶ್ಮೀರಿ ಮುಸಲ್ಮಾನ ವಿದ್ಯಾರ್ಥಿ ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದರೇ ಬಿಹಾರ ಮತ್ತು ಇತರೆ ರಾಜ್ಯದ ವಿದ್ಯಾರ್ಥಿಗಳ ಗುಂಪಿನವರು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು. ತದನಂತರ ಈ ಎರಡೂ ಗುಂಪಿನಲ್ಲಿ ಹೊಡೆದಾಟ ನಡೆಯಿತು. ಎರಡೂ ಬದಿಯವರು ಒಬ್ಬರಿಗೊಬ್ಬರು ಕಲ್ಲು ಎಸೆದರು. ಈಗ ಇಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆಯೆಂದು ಸ್ಥಳೀಯ ಪೊಲೀಸ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ಆವರಣ ಮತ್ತು ವಸತಿಗೃಹದ ಪರಿಸರದಲ್ಲಿ ಬೃಹತ ಪೊಲೀಸ ಬಂದೋಬಸ್ತನ್ನು ಇಡಲಾಗಿದೆ.
ಸಂಪಾದಕೀಯ ನಿಲುವುಕಾಶ್ಮೀರಿದ ಸಮಸ್ಯೆಯು ಧಾರ್ಮಿಕ ಸಮಸ್ಯೆಯಾಗಿದೆ ಎನ್ನುವುದೇ ಇದರಿಂದ ಗಮನಕ್ಕೆ ಬರುತ್ತದೆ ! ಕಾಶ್ಮೀರ ಸಮಸ್ಯೆಯನ್ನು ನಿವಾರಿಸಲು ಅಲ್ಲಿಯ ಜಿಹಾದಿ ಮಾನಸಿಕತೆ ಮತ್ತು ಪಾಕಿಸ್ತಾನ ಪ್ರೇಮವನ್ನು ನಷ್ಟಗೊಳಿಸುವುದು ಆವಶ್ಯಕವಾಗಿದೆ ! ಇಂತಹ ಘಟನೆಗಳಿಂದ ದೇಶದ ರಾಷ್ಟ್ರಪ್ರೇಮಿ ಜನತೆಯು ಕಾಶ್ಮೀರಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಬಹಿಷ್ಕಾರ ಹಾಕಿದರೆ ಆಶ್ಚರ್ಯ ಪಡಬಾರದು ! |