ಅಯೋಧ್ಯೆಯಲ್ಲಿನ ಮಸೀದಿಗಾಗಿ ಸಿಕ್ಕಿದ ದಾನಗಳ ಪೈಕಿ ಶೇಕಡ ೪೦ ರಷ್ಟು ದಾನ ಹಿಂದೂಗಳದ್ದು !

ಶ್ರೀರಾಮ ಜನ್ಮ ಭೂಮಿಯ ಬದಲು ಮಸೀದಿಗಾಗಿ ಜಾಗ ನೀಡಲಾಗಿತ್ತು !

ಮೊದಲ ಚೆಕ್ ನೀಡಿದ ಶ್ರೀ. ರೋಹಿತ್ ಶ್ರೀವಾಸ್ತವ್

ಅಯೋಧ್ಯ (ಉತ್ತರಪ್ರದೇಶ) – ಶ್ರೀರಾಮ ಜನ್ಮ ಭೂಮಿ ಮೊಕದ್ದಮೆಯ ತೀರ್ಪು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ಮುಸಲ್ಮಾನ ಪಕ್ಷದವರಿಗೆ ಅಯೋಧ್ಯೆಯಲ್ಲಿ ಮಸೀದಿ ಕಟ್ಟುವುದಕ್ಕಾಗಿ ೫ ಎಕರೆ ಭೂಮಿ ನೀಡುವ ಆದೇಶ ನೀಡಿತ್ತು. ಅದರ ನಂತರ ಉತ್ತರ ಪ್ರದೇಶ ಸರಕಾರದಿಂದ ಮುಸಲ್ಮಾನರಿಗೆ ಅಯೋಧ್ಯೆಯಲ್ಲಿ ೫ ಎಕರೆ ಭೂಮಿ ನೀಡಲಾಯಿತು. ಈಗ ಅಲ್ಲಿ ಮಸೀದಿ ಕಟ್ಟುವ ಕಾಮಗಾರಿ ನಡೆಯುತ್ತಿದೆ. ಈ ಮಸೀದಿಗಾಗಿ ದಾನವೆಂದು ಹಣ ಸಿಗುತ್ತಿದೆ, ಅದರಲ್ಲಿ ಶೇಕಡ ೪೦ ರಷ್ಟು ದಾನ ಹಿಂದೂಗಳ ನೀಡಿರುವುದು ಬೆಳಕಿಗೆ ಬಂದಿದೆ. ಶೇಕಡ ೩೦ ರಷ್ಟು ದಾನ ಕಂಪನಿಗಳಿಂದ ಹಾಗೂ ಶೇಕಡ ೩೦ ರಷ್ಟು ಮುಸಲ್ಮಾನರಿಂದ ದೊರೆತಿದೆ.

೧. ಮಸೀದಿಯ ಟ್ರಸ್ಟನ ಸಚಿವ ಅತಹರ್ ಹುಸೇನ್ ಇವರು, ಆಗಸ್ಟ್ ೨೦೨೦ ರಲ್ಲಿ ದಾನದ ವಿಷಯವಾಗಿ ಬ್ಯಾಂಕ್‌ನ ಖಾತೆಯ ಮಾಹಿತಿ ನೋಡಿದರೆ, ಅದರ ಪ್ರಕಾರ ನಮಗೆ ೪೦ ಲಕ್ಷ ರೂಪಾಯ ದೊರೆತಿದೆ. ಇದರಲ್ಲಿ ಶೇಕಡ ೩೦ ರಷ್ಟು ಹಣ ಕಂಪೆನಿಗಳಿಂದ, ಶೇಕಡ ೩೦ ರಷ್ಟು ಮುಸಲ್ಮಾನರಿಂದ ಮತ್ತು ಶೇಕಡ ೪೦ ರಷ್ಟು ಹಣ ಹಿಂದೂಗಳಿಂದ ದೊರೆತಿದೆ, ಎಂದು ಹೇಳಿದರು.

೨. ಐಸ್ಟನ ಮಾಹಿತಿಯ ಪ್ರಕಾರ ಗುಪ್ತ ದಾನ ನೀಡುವವರಲ್ಲಿ ಹಿಂದುಗಳ ಸಂಖ್ಯೆ ಹೆಚ್ಚಾಗಿದೆ. ಮಸೀದಿಗಾಗಿ ದಾನ ನೀಡುವವರಲ್ಲಿ ಮೊಟ್ಟಮೊದಲನೆಯ ೧೧ ಜನರು ಹಿಂದೂಗಳೇ ಆಗಿದ್ದಾರೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ಒಂದು ಕಡೆ ಮುಸಲ್ಮಾನರು ಬಾಬರಿ ಮಸೀದಿ ಮೇಲಿನ ಅಧಿಕಾರ ಬಿಡುತ್ತಿರಲಿಲ್ಲ. ಹೀಗಿರುವಾಗ ಶ್ರೀರಾಮ ಜನ್ಮ ಭೂಮಿ ಮುಕ್ತವಾದ ನಂತರವೂ ಬಾಬರಿ ಮಸೀದಿಯ ಬದಲು ಇನ್ನೊಂದು ಮಸೀದಿ ಕಟ್ಟುವುದಕ್ಕಾಗಿ ಹಣ ನೀಡುವ ಹಿಂದೂಗಳು ಏನನ್ನು ಸಾಧಿಸಬೇಕೆಂದು ಅಂದುಕೊಂಡಿದ್ದಾರೆ, ಇದು ತಿಳಿಯುತ್ತಿಲ್ಲ ಎಂದು ಹೇಳಬೇಕಾಗುತ್ತದೆ !
  • ಶ್ರೀರಾಮ ಜನ್ಮಭೂಮಿಯಲ್ಲಿನ ಶ್ರೀರಾಮಮಂದಿರಕ್ಕಾಗಿ ಎಷ್ಟು ಮುಸಲ್ಮಾನರು ದಾನ ನೀಡಿದ್ದಾರೆ, ಇದು ಕೂಡ ಬಹಿರಂಗವಾಗಬೇಕು. ಇದರಿಂದ ಇಂತಹ ಹಿಂದೂಗಳಿಗೆ ‘ಅವರು ಏನು ಮಾಡುತ್ತಿದ್ದಾರೆ ?’, ಇದು ತಿಳಿಯುತ್ತದೆ !