ಪ್ರಭು ಶ್ರೀ ರಾಮನಿಂದ ಪ್ರೇರಣೆ ಪಡೆದು ಸಮಾಜದಲ್ಲಿನ ಪ್ರತಿಯೊಂದು ಅಂಶವನ್ನು ಜೋಡಿಸುವ ಕೆಲಸ ಮಾಡಬೇಕು ! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ

ಬಕ್ಸರ (ಬಿಹಾರ) – ಪ್ರಭು ಶ್ರೀ ರಾಮ ಇವರು ಯಾವಾಗಲೂ ಸಾಮಾಜಿಕ ಐಕ್ಯತೆಯ ಮಾರ್ಗವನ್ನು ಅಂಗೀಕರಿಸಿದ್ದರು. ಶ್ರೀ ರಾಮ ಇವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತವನ್ನು ಒಟ್ಟಾಗಿ ಇಡುವ ಕೆಲಸ ಮಾಡಿದರು. ಅವರು ಸಮಾಜದಲ್ಲಿನ ಪ್ರತಿಯೊಂದು ಅಂಶವನ್ನು ಜೋಡಿಸುವ ಪ್ರಯತ್ನ ಮಾಡಿದರು. ನಾವು ಅವರಿಂದ ಪ್ರೇರಣೆ ಪಡೆಯಬೇಕು. ಸಾಮಾಜಿಕ ಐಕ್ಯತೆಗಾಗಿ ನಾವೆಲ್ಲರೂ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರು ಪ್ರತಿಪಾದಿಸಿದರು.

ಅವರು ಇಲ್ಲಿಯ ಅಹಿರೌಲಿ ಗ್ರಾಮದಲ್ಲಿ ಸಾಧುಗಳ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು.

ಅಹಿರೌಲಿ ಇಲ್ಲಿ ಒಟ್ಟು ೯ ದಿನದ ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಮಹಾಕುಂಭ’ ಈ ಧಾರ್ಮಿಕ ಪರಿಷತ್ತಿನ ಆಯೋಜನೆ ಮಾಡಲಾಗಿದೆ. ಈ ಪರಿಷತ್ತಿನಲ್ಲಿ ಭಾಜಪ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೆಲವು ರಾಜ್ಯಗಳ ರಾಜ್ಯಪಾಲರು ಉಪಸ್ಥಿತರಿರುವ ಸಾಧ್ಯತೆ ಇದೆ.


(ಸೌಜನ್ಯ – RSS Swayamsevak (facebook page))