ನಾನಲ್ಲ, ನನ್ನ ಆತ್ಮವೇ ಕುರಾನನ್ನು ಸುಟ್ಟುಹಾಕಿದೆ ! – ಮುಸಲ್ಮಾನ ಯುವಕನ ಹೇಳಿಕೆ
ಶಾಹಜಹಾಂಪೂರ (ಉತ್ತರಪ್ರದೇಶ) – ಇಲ್ಲಿಯ ಮಸೀದಿಯ ಒಳಗೆ ನುಗ್ಗಿ ಕುರಾನನ್ನು ಸುಟ್ಟಿರುವ ತಾಜ ಮಹಂಮದನನ್ನು ಪೊಲೀಸರು ಬಂಧಿಸಿದ್ದಾರೆ. ಅವನು ಈ ಮಸೀದಿಯಿಂದ ೩ ಕಿ.ಮೀ. ದೂರದಲ್ಲಿರುವ ಬಾವೂಜಯಿ ಮೊಹಲ್ಲಾದ ನಿವಾಸಿಯಾಗಿದ್ದಾನೆ.
Quran burnt in a mosque in Shahjahanpur, Uttar Pradesh
After that, Stone pelting & arson reported in Shahjahanpur.
People used hashtag ‘Islamophobia in India’ on social media.
Now, after CCTV footage, a man named Taj Muhammad arrested for burning Quran in mosque, Shahjahanpur. pic.twitter.com/0Hws4nEbeu
— Anshul Saxena (@AskAnshul) November 3, 2022
೧. ಸ್ಥಳೀಯರಿಗೆ ಕುರಾನ ಸುಟ್ಟಿರುವ ಘಟನೆಯು ತಿಳಿದಾಗ ಅವರು ದೊಡ್ಡ ಸಂಖ್ಯೆಯಲ್ಲಿ ಒಟ್ಟಾಗಿ ಅಲ್ಲಿದ್ದ ಭಾಜಪದ ಫಲಕಗಳನ್ನು ಹರಿದುಹಾಕಿದರು ಹಾಗೂ ಅವುಗಳಿಗೆ ಬೆಂಕಿ ಹಚ್ಚಿದರು. ಇದರ ಮಾಹಿತಿ ದೊರೆಯುತ್ತಲೇ ದೊಡ್ಡ ಪೊಲೀಸ ಪಡೆಯು ಘಟನಾಸ್ಥಳವನ್ನು ತಲುಪಿ ಲಾಠಿಚಾರ್ಜ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ. ಅನಂತರ ಸಿಸಿಟಿವಿ ಚಿತ್ರೀಕರಣದ ಆಧಾರದಲ್ಲಿ ತಾಜನನ್ನು ಬಂಧಿಸಲಾಗಿದೆ.
೨. ಪೊಲೀಸ ಅಧೀಕ್ಷಕರಾದ ಎಸ್. ಆನಂದರವರು ಮಾತಮಾಡುತ್ತ, ಆರೋಪಿಯ ಮಾನಸಿಕ ಸ್ಥಿತಿಯು ಹದಗೆಟ್ಟಿದೆ ಎಂದು ಅನಿಸುತ್ತದೆ. ಅವನ ಕುಟುಂಬದವರು ಹಾಗೂ ಇಸ್ಲಾಮಿನ ಅಧ್ಯಯನಕಾರರನ್ನೂ ಕರೆಯಲಾಗಿದೆ. ಈ ಘಟನೆಯ ಬಗ್ಗೆ ತಾಜನನ್ನು ವಿಚಾರಿಸಲಾದಾಗ ಅವನು ನಾನು ಕುರಾನನ್ನು ಸುಡಲಿಲ್ಲ, ನನ್ನ ಆತ್ಮವು ಅದನ್ನು ಸುಟ್ಟಿದೆ. ನಾನು ಯಾವುದೇ ಕೆಲಸ ಮಾಡುತ್ತಿಲ್ಲ. ಕುಟುಂಬದವರು ನನ್ನ ಮದುವೆ ಮಾಡಿ ಕೊಡುತ್ತಿಲ್ಲ. ಇದರಿಂದಾಗಿ ನಾನು ಬೇಸತ್ತಿದ್ದೇನೆ ಎಂದು ಹೇಳಿದ್ದಾನೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಕುರಾನನ್ನು ಸುಟ್ಟಿರುವ ಯುವಕನನ್ನು ತಕ್ಷಣ ಬಂಧಿಸದೇ ಇದಿದ್ದರೆ, ಈ ಘಟನೆಯ ಆರೋಪವನ್ನು ಹಿಂದೂಗಳ ತಲೆಗೆ ಕಟ್ಟಿ ಯಾರದ್ದಾದರೂ ಶಿರಚ್ಛೇದದ ಘಟನೆಯಾಗುತ್ತಿತ್ತು, ಎಂದು ಯಾರಿಗಾದರೂ ಅನಿಸಿದರೆ ತಪ್ಪೇನಿದೆ ? |