ವಿದ್ಯಾರ್ಥಿ ಕಲಿಯುತ್ತಿದ್ದಾರೆ ‘ಎ’ ಫಾರ್ ಅರ್ಜುನ, ‘ಬಿ’ ಫಾರ್ ‘ಬಲರಾಮ’ !
ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿಯ ೧೨೫ ವರ್ಷಗಳ ಹಳೆಯ ಅಮೀನಾಬಾದ ಇಂಟರ ಕಾಲೇಜಿನ ಚಿಕ್ಕ ಮಕ್ಕಳಿಗೆ ಆಂಗ್ಲ ವರ್ಣಮಾಲೆ ಕಲಿಸಲು ಎಂದಿನಂತೆ ಪ್ರಚಲಿತವಿರುವ ಉದಾಹರಣೆ ನೀಡುವ ಬದಲಾಗಿ ಹಿಂದೂಗಳ ಪೌರಾಣಿಕ ಸಂದರ್ಭದಲ್ಲಿರುವ ಹೆಸರುಗಳನ್ನು ಉಲ್ಲೇಖಿಸಲಾಗುತ್ತಿದೆ. ಉದಾ. ‘ಎ ಫಾರ್ ಅರ್ಜುನ, ಇಸ್ ಎ ಗ್ರೇಟ ವಾರಿಯರ’, ಬಿ ಫಾರ ಬಲರಾಮ, ಇಸ್ ಬ್ರದರ ಆಫ್ ಕೃಷ್ಣಾ’, ಎಂದು ಕಲಿಸಲಾಗುತ್ತಿದೆ.
ಶಾಲೆಯ ಮುಖ್ಯಾಧ್ಯಾಪಕ ಸಾಹೇಬ ಲಾಲ ಮಿಶ್ರಾ ಇವರು, ಇಂದಿನ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ವಿಷಯದಲ್ಲಿ ಕಡಿಮೆ ಜ್ಞಾನವಿದೆ. ಅವರ ಜ್ಞಾನ ವೃದ್ಧಿಸಲು ಈ ಪ್ರಯತ್ನ ಮಾಡಿದ್ದೇವೆ. ಈ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ವಿಷಯದಲ್ಲಿ ಮಾಹಿತಿ ಸಿಗಬಹುದು. ಆಂಗ್ಲ ವರ್ಣಮಾಲೆಯಂತೆಯೇ ಹಿಂದಿ ವರ್ಣಮಾಲೆಯ ಪುಸ್ತಕವನ್ನು ಕೂಡ ಸಿದ್ಧಪಡಿಸಲಾಗುತ್ತಿದೆ. ಹಿಂದಿಯಲ್ಲಿ ಅನೇಕ ಶಬ್ದಗಳಿರುವುದರಿಂದ ಪುಸ್ತಕವನ್ನು ರಚಿಸಲು ಹೆಚ್ಚು ಸಮಯ ತಗಲುತ್ತಿದೆ ಎಂದು ಹೇಳಿದರು.
लखनऊ के स्कूल में अब ‘A’ से अर्जुन और B फॉर बलराम पढ़ाया जाएगा, ऐतिहासिक ज्ञान की तरफ अनोखी पहल #uttarpradesh #school #lucknow #cbse #upboard #study https://t.co/XM6Y7CGe2g
— Oneindia Hindi (@oneindiaHindi) November 1, 2022
ಸಂಪಾದಕೀಯ ನಿಲುವುಯಾವುದಾದರೊಂದು ಶಾಲೆಯು ಇಂತಹ ಪ್ರಯತ್ನ ಮಾಡುವ ಬದಲು ಕೇಂದ್ರ ಮತ್ತು ರಾಜ್ಯ ಸರಕಾರವೇ ಈ ರೀತಿಯ ಪುಸ್ತಕಗಳನ್ನು ನಿರ್ಮಿಸುವ ಆವಶ್ಯಕತೆಯಿದೆ ! ಕಳೆದ ೭೫ ವರ್ಷಗಳಲ್ಲಿ ಇಂತಹ ಪ್ರಯತ್ನಗಳು ಆಗದಿರುವುದು, ಇದು ಇಲ್ಲಿಯವರೆಗಿನ ಎಲ್ಲಪಕ್ಷಗಳ ರಾಜಕಾರಣಿಗಳಿಗೆ ನಾಚಿಕೆಗೇಡು ! |