ಕಾರಾಗೃಹದಲ್ಲಿನ ಸುರಕ್ಷತೆಗಾಗಿ ಆಮ್ ಆದ್ಮಿ ಪಕ್ಷದ ಮಂತ್ರಿಗೆ ೧೦ ಕೋಟಿ ರೂಪಾಯಿ ನೀಡಲಾಗಿದೆ ! – ಸುಕೇಶ ಚಂದ್ರಶೇಖರ ಇವರ ದಾವೆ

ಸುಕೇಶ ಚಂದ್ರಶೇಖರ

ನವದೆಹಲಿ – ಕಾರಾಗೃಹದಲ್ಲಿನ ಸುರಕ್ಷತೆಗಾಗಿ ಆಮ್ ಆದ್ಮಿ ಪಕ್ಷದ ಮಂತ್ರಿ ಸತ್ಯೇಂದ್ರ ಇವರಿಗೆ ೧೦ ಕೋಟಿ ರೂಪಾಯಿ ನೀಡಿರುವುದಾಗಿ ಮಂಡೋಲಿ ಕಾರಾಗೃಹದಲ್ಲಿ ಕೈದಿನಲ್ಲಿರುವ ಸುಕೇಶ ಚಂದ್ರಶೇಖರ ಇವರು ದಾವೆ ಮಾಡಿದರು. ಸುಕೇಶ ಚಂದ್ರಶೇಖರ ಇವರ ಈ ದಾವೆಯಿಂದ ಆಮ್ ಆದ್ಮಿ ಪಕ್ಷದ ತೊಂದರೆಗಳು ಇನ್ನು ಹೆಚ್ಚಾದವು. ಸುಕೇಶ ಚಂದ್ರಶೇಖರ ಇವರು ದೆಹಲಿಯ ಲೆಪ್ಟಿನೆಂಟ್ ಗರ್ವನರ್ ವ್ಹಿ.ಕೆ ಸಕ್ಸೇನ ಇವರಿಗೆ ಪತ್ರದ ಮೂಲಕ ಆಮ್ ಆದ್ಮಿ- ಪಕ್ಷದ ನಾಯಕ ಸತ್ಯೇಂದ್ರ ಜೈನ ಇವರಿಗೆ ಸಂರಕ್ಷಣೆಯ ಹಣ ಎಂದು ೧೦ ಕೋಟಿ ರೂಪಾಯಿ ನೀಡಿರುವುದಾಗಿ ದಾವೆ ಮಾಡಿದ್ದಾರೆ. ರಾಜ್ಯಪಾಲರು ಈ ಪ್ರಕರಣವನ್ನು ಗಂಭೀರ ಎಂದು ಪರಿಗಣಿಸಿ ಅದರ ಅನ್ವೇಷಣೆ ನಡೆಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಸತ್ಯೇಂದ್ರ ಜೈನ ಮನಿ ಲ್ಯಾಂಡ್ರಿಂಗ ಪ್ರಕರಣದಲ್ಲಿ (ಕಪ್ಪು ಹಣ ಬಿಳಿ ಮಾಡುವ ಪ್ರಕರಣ) ಪ್ರಸ್ತುತ ತಿಹಾರ ಜೈಲಿನಲ್ಲಿ ಇದ್ದಾರೆ.

ಈ ವಿಷಯವಾಗಿ ಬಂದಿರುವ ಸಮಾಚಾರದ ಪ್ರಕಾರ, ಸುಕೇಶ ಚಂದ್ರಶೇಖರ ಇವರ ಪರವಾಗಿ ಅವರ ನ್ಯಾಯವಾದಿಗಳು ದೆಹಲಿಯ ಲೆಪ್ಟಿನೆಂಟ್ ಗರ್ವನರ್ ವ್ಹಿ .ಕೆ. ಸಕ್ಸೇನ ಇವರಿಗೆ ಪತ್ರ ಬರೆದಿದ್ದಾರೆ, ಆ ಪತ್ರದಲ್ಲಿ ಸುಕೇಶ ಚಂದ್ರಶೇಖರ ಇವರು ತಮಗೆ ಅನೇಕ ಸಾರಿ ಜೀವ ಬೆದರಿಕೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಅವರು ಈ ಪತ್ರದಲ್ಲಿ ಸತ್ಯೇಂದ್ರ ಜೈನ ಇವರಿಗೆ ಪ್ರೊಟೆಕ್ಷನ್ ಮನಿ ನೀಡಿರುವುದಾಗಿ ಹೇಳಿದ್ದಾರೆ. ಸುಕೇಶ ಚಂದ್ರಶೇಖರ ಇವರು ಸತ್ಯೇಂದ್ರ ಜೈನ ಇವರ ಮೇಲೆ ಬೆದರಿಕೆ ನೀಡಿದ ಆರೋಪ ಮಾಡಿದ್ದಾರೆ.