ಉತ್ತರ ಪ್ರದೇಶದಲ್ಲಿ ಅನುಮತಿ ಇಲ್ಲದೇ ೭ ಸಾವಿರದ ೫೦೦ ಮದರಸಾಗಳನ್ನು ನಡೆಸಲಾಗುತ್ತಿವೆ !

ಸಮೀಕ್ಷೆಯಿಂದ ದೊರೆತ ಮಾಹಿತಿ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಮದರಸಾಗಳ ಸಮೀಕ್ಷೆಯಲ್ಲಿ ೭ ಸಾವಿರದ ೫೦೦ ಮದರಸಾಗಳನ್ನು ಅನುಮತಿಯಿಲ್ಲದೆ ನಡೆಸಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಧರ್ಮಪಾಲ ಸಿಂಗ ಸುದ್ದಿಗಾರರಿಗೆ ತಿಳಿಸಿದರು. ‘ಅನುಮತಿಯಿಲ್ಲದೆ ನಡೆಸಲಾಗುತ್ತಿರುವ ವಮದರಸಾಗಳ ಬಗ್ಗೆ ಉನ್ನತಾಧಿಕಾರ ಸಮಿತಿಯೊಂದು ನಿರ್ಣಯವನ್ನು ತೆಗೆದುಕೊಳ್ಳಲಿದೆ’, ಎಂದೂ ಅವರು ಸ್ಪಷ್ಟಪಡಿಸಿದರು. ಎಲ್ಲಾ ಜಿಲ್ಲಾಧಿಕಾರಿಗಳು ನವೆಂಬರ್ ೧೫ ರೊಳಗೆ ಸಮೀಕ್ಷೆಯ ವರದಿಯನ್ನು ಸಲ್ಲಿಸಲಿದ್ದಾರೆ.

‘ಉತ್ತರಪ್ರದೇಶ ಮದರಸಾ ಶಿಕ್ಷಣ ಮಂಡಳಿ’ಯ ಅಧ್ಯಕ್ಷ ಇಫ್ತಿಖಾರ ಅಹಮದ ಜಾವೇದ ಮಾತನಾಡಿ, ಅನುಮತಿ ಇಲ್ಲದ ಮದರಸಾಗಳ ಸರಿಯಾದ ಸಂಖ್ಯೆ ಸಿಗುವುದು ಇನ್ನೂ ಬಾಕಿ ಇದೆ ಎಂದು ಹೇಳಿದರು. ಪ್ರಸ್ತುತ ಅಂದಾಜು ೭ ಸಾವಿದರ ೫೦೦ ಮದರಸಾಗಳು ಅಸ್ತಿತ್ವದಲ್ಲಿವೆ ಅಲ್ಲದೇ ೧೬ ಸಾವಿರದ ೫೧೩ ಮಾನ್ಯತೆ ಪಡೆದ ಮದರಸಾಗಳಿವೆ. ಇವುಗಳ ಪೈಕಿ ೫೬೦ ಮದರಸಾಗಳ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಸರಕಾರದ ಸಹಾಯಧನದಿಂದ ವೇತನ ನೀಡಲಾಗುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ದೇಶದ ಪ್ರತಿಯೊಂದು ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ಮಾಡುವ ಅವಶ್ಯಕತೆಯಿದೆ ಎಂಬುದೇ ಇದರಿಂದ ಗಮನಕ್ಕೆ ಬರುತ್ತದೆ !