ಕಾಸಗಂಜ (ಉತ್ತರಪ್ರದೇಶ) ಇಲ್ಲಿಯ ನ್ಯಾಯಾಲಯದಲ್ಲಿ ಇಬ್ಬರು ಮಹಿಳಾ ನ್ಯಾಯವಾದಿಗಳಲ್ಲಿ ಹೊಡೆದಾಟ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರ ಪ್ರದೇಶದ ಕಾಸಗಂಜ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಇಬ್ಬರೂ ಮಹಿಳಾ ನ್ಯಾಯವಾದಿಗಳ ನಡುವೆ ಹೊಡೆದಾಟ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಇಬ್ಬರೂ ಒಬ್ಬರೊಬ್ಬರನ ಕೂದಲಗಳ ಎಳೆಯುವುದು, ಕಪಾಲಕ್ಕೆ ಹೊಡೆಯುವುದು, ಹಾಗೂ ತಳ್ಳಾಟ ನಡೆಸುವುದು ಕಾಣುತ್ತಿದೆ. ಈ ಪ್ರಸಂಗದಲ್ಲಿ ಅಲ್ಲಿರುವ ನ್ಯಾಯವಾದಿ ಅವರನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದರು; ಆದರೆ ಅವರಿಬ್ಬರೂ ಕೂಡ ಯಾರ ಮಾತು ಕೇಳದೇ ಇರುವುದು ಈ ವಿಡಿಯೋದಲ್ಲಿ ಕಾಣುತ್ತಿದೆ. ಇವರಲ್ಲಿ ಯಾವ ಕಾರಣದಿಂದ ವಾದ ನಡೆದಿದೆ ಇದು ತಿಳಿದು ಬಂದಿಲ್ಲ.

ಸಂಪಾದಕೀಯ ನಿಲುವು

ಯಾರು ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿ ಜನರಲ್ಲಿ ಅರಿವು ನಿರ್ಮಾಣ ಮಾಡಬೇಕು, ಅವರೇ ಕಾನೂನಿನ ಮಂದಿರ ಇರುವ ನ್ಯಾಯಾಲಯದಲ್ಲಿ ಈ ರೀತಿಯ ಕೃತ್ಯ ನಡೆಸಿದರೆ, ಆಗ ಜನರು ಯಾರ ಬಳಿ ಮೊರೆ ಹೋಗಬೇಕು ?