ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ

ಭಜರಂಗದಳದ ಮೃತ ನಾಯಕನ ಸಹೋದರಿಗೆ ಜೀವ ಬೆದರಿಕೆ

ಹಿಂದೂ ಕಾರ್ಯಕರ್ತರ ಪ್ರಕಾಶನ ಮೇಲೆ ಮಾರಣಾಂತಿಕ ಹಲ್ಲೆ

ಶಿವಮೊಗ್ಗ – ಶಿವಮೊಗ್ಗ ಜಿಲ್ಲೆಯಲ್ಲಿ ಮತಾಂಧನಿಂದ ಒಬ್ಬ ಪ್ರಕಾಶ ಎಂಬ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಮಾರಣಾಂತಿಕ ದಾಳಿ ಮಾಡಲಾಗಿದೆ. ಈ ಪ್ರಕರಣದಲ್ಲಿ ೧೪ ದುಷ್ಕರ್ಮಿಗಳ ವಿರುದ್ಧ ದೂರು ದಾಖಿಸಲಾಗಿದ್ದು ಮುಂದಿನ ತನಿಖೆ ನಡೆಯುತ್ತಿರುವುದರ ಬಗ್ಗೆ ಪೊಲೀಸರು ಹೇಳಿದರು.

ಪ್ರಕಾಶ ಇವರು ಕೆಲಸದಿಂದ ಮನೆಗೆ ಹಿಂತಿರುಗುವಾಗ ಮೂರು ಜನರು ದ್ವಿಚಕ್ರ ವಾಹನದಲ್ಲಿ ಬಂದು ಅವರ ಮೇಲೆ ದಾಳಿ ನಡೆಸಿದ್ದಾರೆ. ಆ ಸಮಯದಲ್ಲಿ ದಾಳಿ ಕೋರರು ಹಿಂದೂ ವಿರೋಧಿ ಘೋಷಣೆ ಕೂಗಿದರು. ಇದರ ವಿರುದ್ಧ ಹಿಂದೂ ಸಂಘಟನೆಗಳು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿ ತಪ್ಪಿತಸ್ಥರಿಗೆ ತಕ್ಷಣ ಬಂಧಿಸಲು ಒತ್ತಾಯಿಸಿದ್ದಾರೆ.

ಭಜರಂಗ ದಳದ ನಾಯಕ ಹರ್ಷ ಇವರ ಕುಟುಂಬದವರಿಗೆ ಜೀವ ಬೆದರಿಕೆ

ಪೋಲಿಸ ಅಧಿಕಾರಿ ಮಿಥುನ ಕುಮಾರ ಇವರು, ಬಜರಂಗ ದಳದ ನಾಯಕ ಹರ್ಷ ಇವರನ್ನು ಫೆಬ್ರುವರಿಯಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಈಗ ಹರ್ಷ ಇವರ ಸಹೋದರಿ ಮತ್ತು ಅವರ ಕುಟುಂಬದವರಿಗೆ ಜೀವ ಬೆದರಿಕೆ ನೀಡಲಾಗಿದೆ. ಅದರ ನಂತರ ಹಿಂದೂ ಕಾರ್ಯಕರ್ತನು ಒಬ್ಬ ಮತಾಂಧನ ವಾಹನವನ್ನು ಧ್ವಂಸ ಮಾಡಿದ್ದಾನೆ.

ಸಂಪಾದಕೀಯ ನಿಲುವು

ಕರ್ನಾಟಕದಲ್ಲಿ ಭಾಜಪಾ ಸರಕಾರ ಇರುವಾಗ ಹಿಂದೂಗಳ ಮೇಲೆ ಈ ರೀತಿ ದಾಳಿ ನಡೆಯುವುದು ಮತ್ತು ಅವರ ಕುಟುಂಬದವರಿಗೆ ಬೆದರಿಕೆ ಸಿಗುವುದು ಹಿಂದೂಗಳಿಗೆ ಅಪೇಕ್ಷಿತವಾಗಿಲ್ಲ. ಸರಕಾರ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !