ಜಿಹಾದಿ ಭಯೋತ್ಪಾದನೆ ವಿರುದ್ಧದ ಕಾರ್ಯತಂತ್ರವನ್ನು ಸಿದ್ಧಪಡಿಸಲು ವಿಶ್ವಸಂಸ್ಥೆಯ ಸಭೆ ಭಾರತದಲ್ಲಿ ನಡೆಯಲಿದೆ !

ನವ ದೆಹಲಿ – ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ‘ಭಯೋತ್ಪಾದನಾ ನಿಗ್ರಹ ಸಮಿತಿ’ಯ ಮಹತ್ವದ ಸಭೆಯು ಅಕ್ಟೋಬರ್ ೨೮ ಮತ್ತು ೨೯ ರಂದು ಭಾರತದಲ್ಲಿ ನಡೆಯಲಿದೆ. ಈ ಸಭೆಯನ್ನು ಅಕ್ಟೋಬರ್ ೨೮ ರಂದು ಮುಂಬಯಿನಲ್ಲಿ ಮತ್ತು ಅಕ್ಟೋಬರ್ ೨೯ ರಂದು ದೆಹಲಿಯಲ್ಲಿ ಆಯೋಜಿಸಲಾಗಿದೆ. ಭಯೋತ್ಪಾದಕಕ್ಕಾಗಿ ಇಂಟರ್‌ನೇಟ, ‘ಡಾರ್ಕ್-ವೆಬ್’ ಮತ್ತು ತಂತ್ರಜ್ಞಾನದ ಬಳಕೆಯ ವಿರುದ್ಧ ಸಮಿತಿಯು ಕಾರ್ಯತಂತ್ರವನ್ನು ಸಿದ್ಧಪಡಿಸಲಿದೆ. ‘ಡಾರ್ಕ್-ವೆಬ್’ ಎಂದರೆ ನಿರ್ದಿಷ್ಟ ಕಂಪ್ಯೂಟರ್ ಸಿಸ್ಟಮ್‌ಗಳಿಂದ ಮಾತ್ರ ಬಳಸಲು ಸಾಧ್ಯವಿರುವ ಇಂಟರನೆಟ್‌ನ ಭಾಗವಾಗಿದೆ. ‘ಡಾರ್ಕ್ ವೆಬ್’ನ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರಚೋದನೆ ನೀಡುವ ಹಲವು ಘಟನೆಗಳಲ್ಲಿ ಪಾಕಿಸ್ತಾನದ ಹೆಸರು ಕೇಳಿಬರುತ್ತಿದೆ. ಅತಿಥೇಯ ರಾಷ್ಟ್ರವಾಗಿರುವ ಭಾರತವು ತನ್ನ ಪರವಾಗಿ ಪ್ರಸ್ತಾವನೆಯು ಅಂಗಿಕಾರವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಬಹುದು. ಇದಕ್ಕಾಗಿ ಭಾರತವು ರಾಜತಾಂತ್ರಿಕ ಮಟ್ಟದಲ್ಲಿಯೂ ಸಿದ್ಧತೆ ಮಾಡಿಕೊಂಡಿದೆ.

೧. ಈ ಸಮಿತಿಯಲ್ಲಿ ಭಾರತವೂ ಸೇರಿದಂತೆ ಹತ್ತು ಸದಸ್ಯ ರಾಷ್ಟ್ರಗಳಾದ ಅಲ್ಬೇನಿಯಾ, ಬ್ರೆಜಿಲ್, ಗ್ಯಾಬೊನ್, ಘಾನಾ, ಐರ್ಲೆಂಡ್, ಕೆನ್ಯಾ, ಮೆಕ್ಸಿಕೊ, ನಾರ್ವೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆಗೆ ವಿಶ್ವಸಂಸ್ಥೆಯ ಐದು ಖಾಯಂ ಸದಸ್ಯರಾದ ಅಮೇರಿಕಾ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ಕೂಡ ಸೇರಿವೆ.

೨. ಭದ್ರತಾ ಪರಿಷತ್ತಿನ ಸಮಿತಿಯು ೭ ವರ್ಷಗಳ ನಂತರ ಮೊದಲ ಬಾರಿಗೆ ನ್ಯೂಯಾರ್ಕ್ ಪ್ರಧಾನ ಕಚೇರಿಯ ಹೊರಗೆ ನಡೆಯುತ್ತಿದೆ. ಈ ಹಿಂದೆ ಇಂತಹ ಸಭೆಯು ಪ್ರಧಾನ ಕಚೇರಿಯ ಹೊರಗೆ ಅಂದರೆ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ೨೦೧೫ ನಲ್ಲಿ ನಡೆದಿತ್ತು.

೩. ವಿಶ್ವಸಂಸ್ಥೆಯ ಪ್ರಕಾರ, ನವದೆಹಲಿಯಲ್ಲಿ ನಡೆಯುವ ಸಭೆಯ ಉದ್ದೇಶವು ‘ಸಂವಾದ ಮತ್ತು ಆರ್ಥಿಕ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಭಯೋತ್ಪಾದಕರಿಂದ ಆಗುತ್ತಿರುವ ಅದರ ದುರುಪಯೋಗವನ್ನು ತಡೆಯುವುದು’, ಎಂಬುದಾಗಿದೆ.