ಶಿವಮೊಗ್ಗದಲ್ಲಿ ಎರಡು ಗುಂಪಿನ ನಡುವೆ ಬಿಗುವಿನ ವಾತಾವರಣ : ಪೊಲೀಸರಿಂದ ದೂರು ದಾಖಲು

ಶಿವಮೊಗ್ಗ – ಶಿವಮೊಗ್ಗಾದಲ್ಲಿ ಮುಸಲ್ಮಾನರು ಮತ್ತು ಹಿಂದೂ ಗುಂಪಿನ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗಾದಲ್ಲಿನ ಸಯ್ಯದ ಪರವೇಜ ಎಂಬ ಮುಸಲ್ಮಾನ ವ್ಯಕ್ತಿಯ ‘ಇನೋವಾ’ ವಾಹನವನ್ನು ಬಜರಂಗದಳದ ಕಾರ್ಯಕರ್ತರು ಹಾನಿಗೊಳಿಸಿದ್ದಾರೆ ಎಂಬ ಆರೋಪವಿದೆ. ಈ ಘಟನೆಯ ನಂತರ ದ್ವಿಚಕ್ರ ವಾಹನಗಳಲ್ಲಿ ಮುಸಲ್ಮಾನ ದಾಳಿಕೋರರು ಬಜರಂಗ ದಳದ ಮುಖಂಡ ಹರ್ಷ ಇವರ ಮನೆಯ ಮೇಲೆ ಚೂರಿ, ಮಚ್ಚು ಮತ್ತು ಇತರ ಘಾತಕ ಶಸ್ತ್ರಾಸ್ತ್ರಗಳೊಂದಿಗೆ ಆಕ್ರಮಣ ಮಾಡಲು ಪ್ರಯತ್ನಿಸಿದರು. ಅವರು ಕಲ್ಲು ತೂರಾಟವನ್ನೂ ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ಎರಡೂ ಗುಂಪಿನ ವಿರುದ್ಧ ದೂರನ್ನು ದಾಖಲಿಸಿದ್ದು ತನಿಖೆ ಮುಂದುವರಿದಿದೆ.

ಪೊಲೀಸರು ನೀಡಿದ ಮಾಹಿತಿಗನುಸಾರ ಶನಿವಾರ ಅಕ್ಟೋಬರ ೨೨ ರಂದು ಹಿಂದುತ್ವನಿಷ್ಠರು ಒಂದು ಮೆರವಣಿಗೆಯನ್ನು ಮಾಡುತ್ತಿದ್ದರು. ಈ ಮೆರವಣಿಗೆಯಲ್ಲಿ ಬಜರಂಗ ದಳದ ಮುಖಂಡ ದಿ. ಹರ್ಷ ಇವರ ಸಹೋದರಿ ಅಶ್ವಿನಿ ಇವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಜರಂಗ ದಳದ ಕಾರ್ಯಕರ್ತರು ವಾಹನಕ್ಕೆ ಹಾನಿ ಮಾಡಿದ್ದಾರೆಂಬ ಆರೋಪವಿದೆ. ಪ್ರಕಾಶ ಎಂಬ ಹೆಸರಿನ ಒಬ್ಬ ಹಿಂದುತ್ವನಿಷ್ಠನು ಗುಂಪನ್ನು ತಡೆಯಲು ಪ್ರಯತ್ನಿಸುತ್ತಿದ್ದಾಗ ಅವನ ಮೇಲೆ ಆಕ್ರಮಣ ಮಾಡಲಾಯಿತು. ಗಾಯಗೊಂಡಿರುವ ಪ್ರಕಾಶನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಶಿವಮೊಗ್ಗಾದ ಪರಿಸ್ಥಿತಿ ಬಿಗುವಿನ ವಾತಾವರಣವಿದ್ದರೂ, ನಿಯಂತ್ರಣದಲ್ಲಿದೆ ಎಂದು ಶಿವಮೊಗ್ಗಾದ ಪೊಲೀಸ್ ಅಧೀಕ್ಷಕ ಮಿಥುನ ನಾಯಿಕ್ ಇವರು ಹೇಳಿದ್ದಾರೆ. (ಗೂಂಡಾ ವೃತ್ತಿಯ ಮತಾಂಧರನ್ನು ತಡೆಯಲು ಕಾಲಾನುಸಾರ ಹಿಂದೂ ಸಂಘಟನೆಯ ಅವಶ್ಯಕತೆಯಿದೆ ! -ಸಂಪಾದಕರು)