ದೂರು ತೆಗೆದುಕೊಂಡು ಬಂದ ಮಹಿಳೆಗೆ ಕರ್ನಾಟಕದ ಭಾಜಪದ ಸಚಿವರಿಂದ ಕಪಾಳಮೋಕ್ಷ

ಬೆಂಗಳೂರು – ಕರ್ನಾಟಕದ ಭಾಜಪ ಸರಕಾರದ ಸಚಿವ ವಿ. ಸೋಮಣ್ಣ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಳ್ಳುತ್ತಿದೆ. ಈ ವಿಡಿಯೋದಲ್ಲಿ ಸೋಮಣ್ಣರವರ ಬಳಿ ದೂರು ನೀಡಲು ಬಂದ ಮಹಿಳೆಗೆ ಕಪಾಳಕ್ಕೆ ಹೊಡೆಯುತ್ತಿರುವುದು ಕಾಣುತ್ತಿದೆ. ಆ ನಂತರವೂ ಸಂಬಂಧಪಟ್ಟ ಮಹಿಳೆಯು ಅವರ ಕಾಲು ಹಿಡಿದು ‘ನನಗೆ ಸಹಾಯ ಮಾಡಿ’ ಎಂದು ಬೇಡಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಅಕ್ಟೋಬರ್ ೨೨ ರಂದು ನಡೆದಿದೆ ಎನ್ನಲಾಗುತ್ತಿದೆ.
ಈ ವಿಡಿಯೋ ಪ್ರಸಾರವಾದ ನಂತರ ಭಾಜಪದ ವಿರುದ್ಧ ಕಾಂಗ್ರೆಸ ಖಂಡಿಸಿದೆ. ರಾಜ್ಯಸಭೆಯಲ್ಲಿನ ಕಾಂಗ್ರೆಸ ಸಂಸದ ರಣದೀಪ ಸಿಂಗ ಸುರ್ಜೇವಾಲಾ ಇವರು, ‘ಇದು ಕರ್ನಾಟಕದ ಸಚಿವರ ಮತ್ತು ಭಾಜಪ ನಾಯಕರ ಅಧಿಕಾರದ ದುರಹಂಕಾರವು ನೆತ್ತಿಗೇರಿದೆ ಮತ್ತು ಅದೇ ಮಾತನಾಡುತ್ತಿದೆ ! ಎಂದು ಟ್ವೀಟ್ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಇದು, ಜನರ ಸಮಸ್ಯೆಗಳ ಬಗ್ಗೆ ನಾಯಕರ ಸಂವೇದನಾಶೀಲ ಇಲ್ಲದಿರುವ ಸಂಕೇತವಾಗಿದೆ ! ಕರ್ನಾಟಕದ ಭಾಜಪ ಸರಕಾರ ಈ ಘಟನೆಯ ತನಿಖೆ ನಡೆಸಿ ಸಂಬಂಧಪಟ್ಟ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಅಪೇಕ್ಷೆ !